ಚಂದ್ರಕಾಂತ ಪೋಕಳೆ ಅವರ ಕಾದಂಬರಿ ‘ಚಂದ್ರಮುಖಿ’. ಈ ಕಾದಂಬರಿಯ ಮೂಲ ಲೇಖಕರಾದ ವಿಶ್ವಾಸ ಪಾಟೀಲರು ಐ.ಎ.ಎಸ್. ಅಧಿಕಾರಿಯಾಗಿ ಮಹಾರಾಷ್ಟ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕಲೆ ಮತ್ತು ರಾಜಕಾರಣವನ್ನು ತಳಕು ಹಾಕಿ ಹಲವು ಸಮಸ್ಯೆಗಳನ್ನು ಹುಟ್ಟು ಹಾಕುವ ಅವರ ಈ ಕೃತಿ ಮರಾಠಿಯಲ್ಲಿ ತುಂಬಾ ಜನಪ್ರಿಯತೆಯನ್ನು ಗಳಿಸಿದೆ. ಚಂದ್ರಕಾಂತ ಪೋಕಳೆಯವರು ಇದನ್ನು ಕನ್ನಡಕ್ಕೆ ಚಂದ್ರಮುಖಿ ಎಂಬ ಹೆಸರಿನಲ್ಲಿ ಅನುವಾದ ಮಾಡಿದ್ದಾರೆ. ಮಹಾರಾಷ್ಟ್ರದ 'ತಮಾಶಾ' ಎಂಬ ಕಲೆಯ ಹುಟ್ಟು, ಬೆಳವಣಿಗೆ ಮತ್ತು ರೂಪಾಂತರಗಳ ಕುರಿತು ವಿಶದವಾಗಿ ಈ ಕಾದಂಬರಿಯಲ್ಲಿ ಬರೆದಿದ್ದಾರೆ. ಹಲವಾರು ಲಾವಣಿಗಳನ್ನು ಇದರಲ್ಲಿ ಕಾಣಬಹುದು. ಅನುವಾದಕರಾದ ಪೋಕಳೆಯವರ ಅಭಿಪ್ರಾಯದಂತೆ ಇತ್ತೀಚೆಗೆ ತಮಾಶಾ ಎಂಬ ಜಾನಪದ ಕಲೆಯ ಬಗ್ಗೆ ವಿಶೇಷವಾಗಿ ನಗರಗಳಲ್ಲಿ, ಹಾರಿಕೆಯ ಹಗುರ ಧಾಟಿಯ ಭಾವನೆಯನ್ನು ಪ್ರದರ್ಶನ ಮಾಡಲಾಗುತ್ತದೆ. ಇದರ ಆಧಾರದ ಮೇಲೆ ಆ ಕಲೆಯ ಮೂಲ್ಯಾಂಕನ ಮಾಡಲು ಹೊರಟರೆ ಅದು ತಪ್ಪಾಗುತ್ತದೆ. ತಮಾಶಾ ಎಂಬ ಜಾನಪದ ಕಲೆಯು ಒಂದು ಕಾಲದಲ್ಲಿ ಮಹಾರಾಷ್ಟ್ರದ ಬಹುಜನ ಸಮಾಜದ ಮನರಂಜನೆಯ ಉಸಿರಾಗಿತ್ತು. ಮಹಾರಾಷ್ಟ್ರದ ಮಹಾರ, ಮಾಂಗ, ಡೊಂಬ ಮುಂತಾದ ದಲಿತ, ಪದದಲಿತ ಮತ್ತು ಅಲೆಮಾರಿಗಳು ತಮ್ಮ ಬದುಕನ್ನೇ ಮುಡುಪಾಗಿಟ್ಟು, ಈ ಕಲೆಯನ್ನು ಬೆಳೆಸಿದರು. ಅದರಲ್ಲಿ ಮನ ಸೂರೆಗೊಳ್ಳುವಂತಹ ನೃತ್ಯ, ನಾಟ್ಯ, ವಿನೋದ ಮತ್ತು ಸಂಗೀತವಿರುತ್ತಿತ್ತು. ಈ ಕಾದಂಬರಿಯ ಕಥಾನಾಯಕಿ ಚಂದ್ರಮುಖಿ ಆ ಕಲೆಗೆ ಮೂರ್ತರೂಪ ಕೊಟ್ಟ ನರ್ತಕಿ.
©2024 Book Brahma Private Limited.