ಅಷ್ಟಾವಕ್ರನೂ ಅಪೂರ್ವ ಸುಂದರಿಯೂ ಫ್ರೆಂಚ್ ಕಾದಂಬರಿಕಾರ ವಿಕ್ಟರ್ ಹ್ಯೂಗೊನ ಕಾದಂಬರಿಯನ್ನು ಲೇಖಕ ರಾಜಣ್ಣ ತಗ್ಗಿ ಅವರು ಕನ್ನಡೀಕರಿಸಿದ್ದಾರೆ. ಈ ಕಾದಂಬರಿಯು ತ್ರಿಕೋನ ಪ್ರೇಮಕಥೆ ಹೊಂದಿದೆ. ಫ್ರಾನ್ಸ್ ದೇಶದ ರಾಜಕೀಯ ಮತ್ತು ನ್ಯಾಯಾಲಯಗಳ ಅಧಃಪತನದ ಕಥೆಯೂ ಹೌದು. ಈ ಕಾದಂಬರಿಯ ನಾಯಕಿ ಒಬ್ಬ ಜಿಪ್ಸಿ ಯುವತಿ. ನಿಲ್ಲಲು ನೆಲೆಯಿಲ್ಲದೆ ಸದಾ ಅಲೆಮಾರಿಯಾಗಿ ತಿರುಗವ ಈ ಜಿಪ್ಸಿಯ ಹೆಸರು ಎಮರಾಲ್ಡಾ ಅತ್ಯಂತ ಲಾವಣ್ಯವತಿ, ಅತಿಲೋಕ ಸುಂದರಿ ಕೂಡ..ಈಕೆಯ ಪ್ರೀತಿಗಾಗಿ, ಮೋಹಕ್ಕಾಗಿ ಮತ್ತು ದೇಹಕ್ಕಾಗಿ ಹಾತೊರೆಯುತ್ತ ಹಪಹಪಿಸುವುದು ಕಾದಂಬರಿಯ ಪ್ರಧಾನ ಧಾರೆ.
ಪ್ರೇಮೆ ಗ್ಯಾಂಗ್ವಾರ್, ಈತನೊಬ್ಬ ಕವಿ, ನಾಟಕಕಾರ. ಈತನದು ಹೊಟ್ಟೆಹೊರೆಯುವ ಪ್ರೇಮ..ಉಳಿದ ಮೂವರಲ್ಲಿ ಇಬ್ಬರು ಪ್ರೇಮದ ಹೆಸರನ್ನು ಬಳಸುವ ಕಾಮದಾಹಿಗಳು, ನಾಲ್ಕನೆಯವ ನಿಷ್ಕಾಮ ಪ್ರೇಮಿ. ಈತ ಕಾದಂಬರಿಯ ನಾಯಕ ಕೂಡಾ. ಹೆಸರು ಕ್ವಾಸಿಮೊಡೊ, ಈತನದು ಪರಿಶುದ್ಧ ಪ್ರೇಮ. ವಿಚಿತ್ರ ಪ್ರೇಮವೂ ಕೂಡ, ಈತನೊಬ್ಬ ಕುರೂಪಿ. ಅಷ್ಟಾವಕ್ರ ಎಂದರೂ ಸರಿಯೇ. ಎಲ್ಲರೂ ಅಸಹ್ಯಪಡುವಷ್ಟು ವಿರೂಪದ ಮನುಷ್ಯ. ಈತನನ್ನು ಮನುಷ್ಯನೆಂದು ಭಾವಿಸಿದವರೇ ಇಲ್ಲ ಒಬ್ಬನನ್ನು ಬಿಟ್ಟು, ಇವನೊಬ್ಬ ಅನ್ಯಕಾರಿ. ಈ ನಾಲ್ಕೂ ಜನರ ಕಾಮ ಪ್ರೇಮಗಳಲ್ಲಿ ಸಾಗುವ ಕಾದಂಬರಿ ವಿಷಾದದಿಂದ ಕೂಡಿದ ದುರಂತ ಪ್ರೇಮಕಥೆಯೂ ಹೌದು. ಹಾಗೆಯೇ ಅದ್ಭುತ ಪ್ರೇಮ, ಹಿಂಸೆ, ಮೋಸ ಮತ್ತು ಕ್ರೌರ್ಯವನ್ನೂ ಕಾಣಬಹುದು.
©2024 Book Brahma Private Limited.