ಆಮೋಸ್ ಫಾರ್ಚೂನ್

Author : ಜಯಶ್ರೀ ಭಟ್

Pages 88

₹ 100.00




Year of Publication: 2015
Published by: ಛಂದ ಪುಸ್ತಕ
Address: ಐ- 004, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು – 76
Phone: 9844422782

Synopsys

ಎಲಿಝಬೆತ್ ಯೇಟ್ಸ್ 1950 ರಲ್ಲೇ ಬರೆದಿರುವ ’ಆಮೋಸ್ ಫಾರ್ಚೂನ್’ ಕೃತಿಯನ್ನು ಕನ್ನಡಕ್ಕೆ ತಂದವರು ಜಯಶ್ರೀ ಭಟ್.

ತೊಗಲಬಣ್ಣದ ಕಾರಣದಿಂದಲೇ ಅಪಮಾನಕ್ಕೆ ಅನ್ಯಾಯಕ್ಕೆ ಒಳಗಾದ ಆಫ್ರಿಕಾದ ರಾಜಕುವರ ಆಮೋಸ್. ಜಾನುವಾರಗಳ ಚರ್ಮವನ್ನು ಹದಮಾಡಿ ಬಿಳಿಯರ ದೇಹ ಮುಚ್ಚಲು ಬಟ್ಟೆಯಾಗಿ ರೂಪಾಂತರ  ಮಾಡುತ್ತಾನೆ.

ಕನಸುಗಾರನೂ, ಹಾಡುಗಾರನೂ, ಕತೆಗಾರನೂ ಆದ ಆತನ ಕೈಯಲ್ಲಿ ತೊಗಲು ಹದಗೊಳಿಸುವ ಕಾಯಕವು ಅಪೂರ್ವ ಕಲೆಯಾಗಿ ಮೂಡುತ್ತದೆ. ಕೃತಿಯ ಕೊನೆಯಲ್ಲಿ ಒಬ್ಬ ಬಿಳಿಯ , ಆಮೋಸ್ ನಲ್ಲಿ ತನ್ನ ಮಗನು ತೊಗಲು ಹದಗೊಳಿಸುವ ಕಲೆ ಕಲಿಯಲು ಶಿಷ್ಯನಾಗಿ ಕಳಿಸಿಕೊಡುವ ಚಿತ್ರ ಬರುತ್ತದೆ.

ಇಂತಹ ಕೆಲವು ಸರಳ ವಿವರಗಳು ಈ ಕೃತಿಯುದ್ದಕ್ಕೂ ಇರುವಂತದ್ದು. ಕರಾಳ ಗುಲಾಮಗಿರಿಯ ದಮನ ಮತ್ತು ಭರವಸೆ ಕಳೆದುಕೊಳ್ಳದೆ ಬಿಡುಗಡೆಗಾಗಿ ಮಾಡುವ ಅದಮ್ಯ ಚೈತನ್ಯಗಳನ್ನು ಮುಖಾಮುಖಿಗೊಳಿಸುವ ಪ್ರಯತ್ನವನ್ನು ಈ ಕೃತಿ ಮಾಡಿದೆ.

About the Author

ಜಯಶ್ರೀ ಭಟ್

ಲೇಖಕಿ ಜಯಶ್ರೀ ಭಟ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬನದಕೊಪ್ಪದವರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಬನದಕೊಪ್ಪ ಮತ್ತು ನಿಸರಾಣಿಯಲ್ಲಿ ಪೂರೈಸಿ, ಮೈಸೂರಿನ ಚಾಮರಾಜೇಂದ್ರ ಅಕಾಡೆಮಿಯಲ್ಲಿ ಚಿತ್ರಕಲಾ ಪದವೀಧರರು.  INTACHನ ಬೆಂಗಳೂರು ಶಾಖೆಯಲ್ಲಿ ತರಬೇತಿಗೆ ಸೇರಿದರು. ಒಂಬತ್ತು ವರ್ಷಗಳ ಕಾಲ ಅದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ, 2002 ರಲ್ಲಿ ತಮ್ಮ ಪತಿ ಚಂದ್ರಹಾಸ ಭಟ್ ರೊಂದಿಗೆ ಇಂಗ್ಲೆಂಡ್ ನ ಲಿವರ್ ಪೂಲ್ ಗೆ ತೆರಳಿದರು. 2004 ರಲ್ಲಿ ಸಿಂಗಪುರಕ್ಕೆ ಬಂದ ಇವರು, ಅಲ್ಲಿಯೇ ತಮ್ಮ ಮಗಳು ನಿಧಿಯೊಡನೆ ನೆಲೆಸಿದ್ದಾರೆ.  ಇವರು ಕನ್ನಡದ ಪತ್ರಿಕೆಗಳಿಗೆ ಲೇಖನ, ಕತೆಗಳನ್ನು ಬರೆಯುತ್ತಾರೆ. ಜೊತೆಗೆ ಅನುವಾದದಲ್ಲೂ ...

READ MORE

Related Books