ಲೇಖಕಿ ಜಯಶ್ರೀ ಭಟ್ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬನದಕೊಪ್ಪದವರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಬನದಕೊಪ್ಪ ಮತ್ತು ನಿಸರಾಣಿಯಲ್ಲಿ ಪೂರೈಸಿ, ಮೈಸೂರಿನ ಚಾಮರಾಜೇಂದ್ರ ಅಕಾಡೆಮಿಯಲ್ಲಿ ಚಿತ್ರಕಲಾ ಪದವೀಧರರು. INTACHನ ಬೆಂಗಳೂರು ಶಾಖೆಯಲ್ಲಿ ತರಬೇತಿಗೆ ಸೇರಿದರು. ಒಂಬತ್ತು ವರ್ಷಗಳ ಕಾಲ ಅದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ, 2002 ರಲ್ಲಿ ತಮ್ಮ ಪತಿ ಚಂದ್ರಹಾಸ ಭಟ್ ರೊಂದಿಗೆ ಇಂಗ್ಲೆಂಡ್ ನ ಲಿವರ್ ಪೂಲ್ ಗೆ ತೆರಳಿದರು. 2004 ರಲ್ಲಿ ಸಿಂಗಪುರಕ್ಕೆ ಬಂದ ಇವರು, ಅಲ್ಲಿಯೇ ತಮ್ಮ ಮಗಳು ನಿಧಿಯೊಡನೆ ನೆಲೆಸಿದ್ದಾರೆ.
ಇವರು ಕನ್ನಡದ ಪತ್ರಿಕೆಗಳಿಗೆ ಲೇಖನ, ಕತೆಗಳನ್ನು ಬರೆಯುತ್ತಾರೆ. ಜೊತೆಗೆ ಅನುವಾದದಲ್ಲೂ ಆಸಕ್ತಿ. ಎಲಿಝಬೆತ್ ಯೇಟ್ಸ್ 1950 ರಲ್ಲಿ ಬರೆದಿರುವ ’ಆಮೋಸ್ ಫಾರ್ಚೂನ್’ ಹಾಗೂ ಲೀ ಕ್ವಿನ್ ಕಿಂಗ್ ಆತ್ಮಕತೆಯನ್ನು 'ಮಾವೋನ ಕೊನೆಯ ನರ್ತನ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.