ವ್ಯೂಹ

Author : ಪಿ. ವಿ. ನಾರಾಯಣ

Pages 231

₹ 120.00




Published by: ಸೌಮ್ಯ ಎಂ
Address: 7/1 ಎಂ. ಎನ್. ಕೃಷ್ಣರಾವ್ ಪಾರ್ಕ್ ಎದುರು, ಬಸವನಗುಡಿ, ಬೆಂಗಳೂರು-560004

Synopsys

ʼವ್ಯೂಹʼ ಕಾದಂಬರಿಯು ಗೇಬ್ರಿಯಲ್ ಗಾರ್ಸಿಯಾ ಮಾಕ್ವೇಜ್ ಅವರು ಇಂಗ್ಲಿಷ್ ಕಾದಂಬರಿಯ ಕನ್ನಡಾನುವಾದ. ಸಾಹಿತಿ ಡಾ. ಪಿ. ವಿ ನಾರಾಯಣ್‌ ಅವರು ಅನುವಾದಕರು. ಹಿಂದಿನ ಮಹಾ ವ್ಯಕ್ತಿಗಳ ಅವಾಸ್ತವಿಕ ಆದರ್ಶದಂತೆಯೂ, ಕಲ್ಪನಾಲೋಕದ ಕನಸುಗಳಂತೆಯೂ ಕಾಣುವ ಅನೇಕ ನಿರೀಕ್ಷೆಗಳು, ಆಶೋತ್ತರಗಳು ವರ್ತಮಾನದಲ್ಲಿ ಪಡೆದುಕೊಂಡಿರುವ ರೂಪಾಂತರಗಳನ್ನು ಕತೆಯ ರೂಪದಲ್ಲಿ ವಿವರಿಸಲಾಗಿದೆ. ಹಲವಾರು ತ್ಯಾಗ, ಬಲಿದಾನ, ಸಾವು, ನೋವುಗಳ ಹೋರಾಟದಾಚೆ ದೇಶವೊಂದು ಸ್ವಾತಂತ್ರ್ಯ ಪಡೆದುಕೊಳ್ಳಲು ಹೆಣಗಾಡುತ್ತದೆ. ಆದರೆ, ಇತಿಹಾಸ ಆ ಹೋರಾಟವನ್ನೂ, ಯಶಸ್ಸನ್ನೂ, ಕಾಲಾನಂತರ ಆ ಯಶಸ್ಸಿನ ಭವಿತವ್ಯವನ್ನೂ ತಣ್ಣಗೆ ದಾಖಲಿಸುವ ಈ ಕಾದಂಬರಿಯು ವಾಸ್ತವಿಕತೆಯನ್ನು ವಿವರಿಸುತ್ತಾ ಸಾಗುತ್ತದೆ. ಒಟ್ಟಿನಲ್ಲಿ ಈ ಕಾದಂಬರಿಯು ಸ್ವಾತಂತ್ರ್ಯ ಹೋರಾಟದ ಸುತ್ತ ಸುತ್ತುತ್ತದೆ.

About the Author

ಪಿ. ವಿ. ನಾರಾಯಣ
(18 December 1942)

ಡಾ. ಪಿ. ವಿ. ನಾರಾಯಣ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಪ್ರವಾಚಕರಾಗಿದ್ದರು. ತಂದೆ ಪಿ.ವೆಂಕಪ್ಪಯ್ಯ, ತಾಯಿ ನರಸಮ್ಮ. ಬೆಂಗಳೂರಿನಲ್ಲಿ 1942ರ ಡಿ.18 ರಂದು ಹುಟ್ಟಿದರು.  ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್), “ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ” ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ.. ವಿಮರ್ಶೆ/ಸಂಶೋಧನೆ-ಬಳ್ಳಿಗಾವೆ, ಕಾಯತತ್ತ್ವ, ಚಂಪೂಕವಿಗಳು, ವಚನ ಚಳವಳಿ, ವಚನ ವ್ಯಾಸಂಗ ಮೊದಲಾದ 16ಕೃತಿಗಳು. ಸಂಪಾದಿತ-ಬಸವ ಪುರಾಣ ಸಂಗ್ರಹ, ಪದ್ಮಿನೀ ಪರಿಣಯ ಮೊದಲಾದ 5 ಕೃತಿಗಳು. ಅನುವಾದ-ಮದುವೆ ಮತ್ತು ನೀತಿ, ಹನ್ನೆರಡನೇ ರಾತ್ರಿ, ಅಶ್ವತ್ಥಾಮನ್, ಬುವಿಯ ಬಸಿರಿಗೆ ಪಯಣ, ಪಂಪ ರಾಮಾಯಣ  ಮುಂತಾದ 12 ಕೃತಿಗಳು. ಕಾದಂಬರಿಗಳು-ಸಾಮಾನ್ಯ, ...

READ MORE

Related Books