ʻಆಗ್’ ಎಂಬ ಮರಾಠಿ ಕಾದಂಬರಿಯ ಕನ್ನಡ ಅನುವಾದ ಕೃತಿ ʻಉರಿಗೆಂಡʼ. ವಿಠಲರಾವ್ ಟಿ. ಗಾಯಕ್ವಾಡ್ ಅವರು ಅನುವಾದಿಸಿದ್ದಾರೆ. ಮಹಾರಾಷ್ಟ್ರದ ಮರಾಠಾವಾಡ ಪ್ರಾಂತ್ಯದಲ್ಲಿ ಸುಮಾರು ಇಪ್ಪತ್ತು ವರ್ಷಗಳ ಕಾಲ ದಲಿತರು ನಡೆಸಿದ ‘ನಾಮಾಂತರ ಚಳುವಳಿ’ಯ ಕಥಾವಸ್ತುವನ್ನು ಇಟ್ಟುಕೊಂಡು ಪ್ರಸ್ತುತ ಕಾದಂಬರಿಯನ್ನು ರಚಿಸಿದ್ದಾರೆ. ʻಮರಾಠಾವಾಡ ವಿಶ್ವವಿದ್ಯಾಲಯʼ ಎನ್ನುವುದನ್ನು ‘ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿಶ್ವವಿದ್ಯಾಲಯ’ ಎಂದು ನಾಮಕರಣ ಮಾಡಿ ಎಂಬ ಬೇಡಿಕೆಯೇ ಈ ಚಳುವಳಿಯ ಮುಖ್ಯ ಆಶಯ. ನೂರಾರು ಜನ ಇದಕ್ಕಾಗಿ ತಮ್ಮ ರಕ್ತವನ್ನು ಹರಿಸಿದ್ದರು. ಹೀಗೆ ದೀರ್ಘ ಕಾಲದ ಈ ಮಹತ್ವದ ಹೋರಾಟ ಒಂದು ಹೊಸ ಸಾಮಾಜಿಕ ಕ್ರಾಂತಿಯಾಗಿಯೂ ಪರಿವರ್ತನೆಯನ್ನು ಪಡೆಯಿತು. ಅಸಂಖ್ಯಾತ ದಲಿತ ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಶಯಗಳಿಂದ ಬದಲಾವಣೆಗಳನ್ನು ತರಲು ಪ್ರಯತ್ನಿಸಿದ್ದರು. ಇಂಥ ಹೋರಾಟದ ಕಥನ ಈ ಕೃತಿಯಲ್ಲಿ ದಾಖಲಾಗಿದೆ.
©2024 Book Brahma Private Limited.