‘ಅಂಕಲ್ ಟಾಮ್ ನ ಕತೆ’ ವರ್ಣಭೇದ ನೀತಿ ವಿರುದ್ಧದ ಹೋರಾಟದಲ್ಲಿ ಜನಾಭಿಪ್ರಾಯವನ್ನು ಮೂಡಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಹ್ಯಾರಿಯಟ್ ಬೀಚರ್ ಸ್ಟೋವ್ ಅವರ ಅಂಕಲ್ ಟಾಮ್ಸ್ ಕ್ಯಾಬಿನ್ ನ ಸಂಕ್ಷಿಪ್ತ ಭಾವಾನುವಾದ. ಅಬ್ರಹಾಂ ಲಿಂಕನ್ ಅವರಿಂದ ಆರಂಭಿಸಿ ಅನೇಕ ಅಗ್ರಶ್ರೇಣಿ ನಾಯಕರಿಗೆ ಸ್ಪೂರ್ತಿ ತುಂಬಿದ ಅಂಕಲ್ ಟಾಮ್ಸ್ ಕ್ಯಾಬಿನ್ ಮೊದಲ ಮುದ್ರಣದಲ್ಲೇ ಮೂರು ಲಕ್ಷ ಪ್ರತಿಗಳ ಮಾರಾಟದ ದಾಖಲೆ ಸ್ಥಾಪಿಸಿದ್ದಲ್ಲದೆ, ಈವೆರೆಗೂ ಅನೇಕ ಮುದ್ರಣಗಳನ್ನು ಕಂಡು ಸುಮಾರು ಹದಿನೈದು ಮಿಲಿಯನ್ ಪ್ರತಿಗಳು ಮಾರಾಟವಾಗಿರುವ ಅಪ್ರತಿಮ ಜನಪ್ರಿಯತೆ ಗಳಿಸಿದೆ. ಜಗತ್ತಿನ 40 ಭಾಷೆಗೆ ಅನುವಾದವಾಗಿರುವ ಇದರ ನಾಟಕ ರೂಪಾಂತರ ಐವತ್ತು ವರ್ಷಗಳ ಪ್ರದರ್ಶನದ ದಾಖಲೆ ಹೊಂದಿದೆ. ಈ ಜನಪ್ರಿಯ ಕೃತಿಯನ್ನು ಲೇಖಕ ಎನ್.ಎಸ್. ಶ್ರೀಧರಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.