‘ಟೈಪೀ’ ಕೃತಿಯು ಎಂ. ಗೋಪಾಲಕೃಷ್ಣ ಅಡಿಗ ಅವರ ಅನುವಾದಿತ ಕೃತಿಯಾಗಿದೆ. ಹರ್ಮನ್ ಮೆಲ್ವಿಲ್ ಅವರು ಈ ಕೃತಿಯ ಮೂಲ ಲೇಖಕರು. ಕೃತಿಗೆ ಮುನ್ನಡಿ ಬರೆದಿರುವ ಗೋಪಾಲಕೃಷ್ಣ ಅಡಿಗ ಅವರು, ವಿಶ್ವ ಸಾಹಿತ್ಯದ ಉತ್ಸವ ಕೃತಿಗಳನ್ನು ವ್ಯವಸ್ಥಿತ ರೀತಿಯಲ್ಲಿ ಕನ್ನಡ ಭಾಷೆಗೆ ಅನುವಾದಿಸಿ ಆ ಮೂಲಕ ನಮ್ಮಜನಕ್ಕೆ ಪರಿಚಯ ಮಾಡಿಕೊಡಬೇಕೆಂದು ನಾವು ಸುಮಾರು ಎರಡು ವರ್ಷಗಳಿಂದಲೂ ಯೋಚಿಸುತ್ತಿದ್ದವು. ತಡವಾಗಿಯಾದರೂ ಈಗ ನಮ್ಮ ಯೋಜನೆ ಕಾರ್ಯರೂಪಕ್ಕೆ ಬರುತ್ತಿರುವುದು ನಮಗೆ ಸಮಾಧಾನ ತಂದು ಕೊಟ್ಟಿದೆ. ಆಧುನಿಕ ಕನ್ನಡ ಸಾಹಿತ್ಯ ಇಂದು ಸರ್ವತೋಮುಖವಾಗಿ ಹೆಮ್ಮೆ ಪಡಬಹುದಾದ ರೀತಿಯಲ್ಲಿ ಬೆಳೆಯುತ್ತಿದೆ. ಕೆಲವು ರಾಷ್ಟ್ರೀಯ ಮತ್ತೆ ಕೆಲವು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿಕೊಳ್ಳುತ್ತಿವೆ. ಇದರಿಂದ ನಾವು ಸಾಕಷ್ಟು ತೃಪ್ತಿ ಪಟ್ಟು, ಕೊಳ್ಳಬಹುದಾದರೂ, ಇಷ್ಟಕ್ಕೆ ಪ್ರಯತ್ನ ನಿಲ್ಲಿಸುವಂತಿಲ್ಲ : ನಿಲ್ಲಿಸಬಾರದು. ವಿಶ್ವದ ಕೆಲವು ಉತ್ತಮ ಕೃತಿಗಳು ಈಗಾಗಲೇ ಕನ್ನಡದಲ್ಲಿ ಬಂದಿದೆ: ಬರಬೇಕಾದದ್ದು ಬಹಳಷ್ಟಿವೆ. ಆದುದರಿಂದ ನಾವೂ ಕೆಲವು ಕೃತಿಗಳನ್ನು ಕಥೆ, ಕಾದಂಬರಿ, ನಾಟಕ ಮತ್ತೆ ಕೆಲವು ಪ್ರಬಂಧಗಳನ್ನು ಆಯ್ದುಕೊಂಡು ಕನ್ನಡಭಾಷೆಗೆ ರೂಪಾಂತರಿಸುವ ಯೋಜನೆ ಹೊಂದಿದ್ದೇವೆ. ಈ ಪ್ರಯತ್ನದಿಂದ ಕನ್ನಡಕ್ಕೆ ಮತ್ತಷ್ಟು ಕೃತಿಗಳು ದೊರೆತಂತೆ ಆಗುವುದಲ್ಲದೆ, ಮೂಲ ಓದಲಾಗದ ಜನರಿಗೆ ಅವಕಾಶ ಕಲ್ಪಿಸಿದಂತಾಗಿ, ಪರ್ಯಾಯವಾಗಿ ನಮ್ಮ ಸಾಹಿತ್ಯ ಸಮೃದ್ಧವಾಗುತ್ತದೆ ಎಂಬ ಆಶಯ ಹೊಂದಿದ್ದೇವೆ. ಈ ಯೋಜನೆಯನ್ನು ಮೆಚ್ಚಿ ಪ್ರೋತ್ಸಾಹಿಸಿದ ನಮ್ಮ ಕರ್ನಾಟಕ ಸರ್ಕಾರ, ಅಲ್ಲದ ಮಾನ್ಯರಾದ ಎಚ್. ಶ್ರೀನಿವಾಸ್, ಎ. ಆರ್, ಬದರೀನಾರಾಯಣ್, ಪಂಪ ನಾಗರಾಜಯ್ಯ, ಪ್ರೊ), ಜಿ, ವೆಂಕಟಸುಬ್ಬಯ್ಯ, ಅವಲ ಮಲಿಕ್, ಶ್ರೀ ಜಯತೀರ್ಥ ರಾಜಪುರೋಹಿತ, ಅನಿರುದ್ಧ ದೇಸಾಯ, ಆರ್. ಕೆ. ಕೆಳವಾಡಿ, ಶ್ರೀ ರಾಮ ಹನುಮಯ್ಯ ಮತ್ತು ಇನ್ನೂ ಕೆಲ ಮಹನೀಯರು ಸಹಕರಿಸಿದ್ದಾರೆ' ಎಂದು ಸ್ಮರಿಸಿದ್ದಾರೆ..
©2024 Book Brahma Private Limited.