‘ದಿ ಮೂನ್ ಈಸ್ ಡೌನ್’ ಕಾದಂಬರಿಯನ್ನು ನೊಬೆಲ್ ಬಹುಮಾನ ಪುರಸ್ಕೃತ ಲೇಖಕ ಜಾನ್ ಸ್ಟೇನ್ ಬೆಕ್ ಅವರು ಬರೆದಿದ್ದು, ಲೇಖಕ, ಅನುವಾದಕ ಸು. ಕೃಷ್ಣ ನೆಲ್ಲಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯ ಬೆನ್ನುಡಿಯಲ್ಲಿ ಕೃತಿಯೊಳಗಿನ ಕೆಲವೊಂದು ವಿಚಾರಗಳು ಹೀಗೆ ಬಿತ್ತರಿಸಿಕೊಂಡಿವೆ; ‘ಯುದ್ದವೆಂದರೆ ಮಾನವ ಪ್ರಾಣಿ ಕಂಡುಹಿಡಿದಿರುವ ಅತ್ಯಂತ ಕ್ರೂರವಾದ, ವಿನಾಶಕಾರಿಯಾದ, ಆತ್ಮಘಾತುಕವಾದ ಮಾನವ ಶಕ್ತಿಯ ಅಪಪ್ರಯೋಗ, ಅಮಾಯಕರ ಮೇಲೆ, ಶಾಂತಿ- ನೆಮ್ಮದಿಯಿಂದ ಕೂಡಿ ಇನ್ನೊಬ್ಬರ ಮೇಲೆ ದಾಳಿ ಮಾಡದವರ ಮೇಲೆ, ನಿಷ್ಕಾರುಣವಾಗಿ, ಮುನ್ಸೂಚನೆ, ಮುನ್ನೆಚ್ಚರಿಕೆಯನ್ನು ಕೊಡದೆಯೇ ಆಕ್ರಮಣ ಮಾಡುವುದಂತೂ ಅಮಾನವೀಯವಾದ ಹೇಯ ನಡವಳಿಕೆ, ಅವರನ್ನು ಸುಲಿಗೆ ಮಾಡಿ ಕೊಳ್ಳೆ ಹೊಡೆಯುವುದರ ಜತೆಗೆ ಅಂಥವರನ್ನು ತಮ್ಮ ಆಡಿಯಾಳನ್ನಾಗಿಸಿ ಕೊಂಡು ನಿರ್ದಯತೆಯಿಂದ, ಗುಲಾಮರಂತೆ ನಡೆಸಿಕೊಳ್ಳುವುದಂತೂ ಅನಾಗರಿಕವಾದ ಹಿಂಸಾವಾದ ಅನ್ಯಾಯವಾದ ಪರಮಾವಧಿ. ಇದರಿಂದ ಸೋತವರಿಗೆ, ತಾತ್ಕಾಲಿಕವಾಗಿ ದಮನಿತರಾದವರಿಗೆ ಉಂಟಾಗುವ ಹಾನಿ, ಗ್ಲಾನಿಯಂತೂ ಎಲ್ಲರಿಗೂ ಗೊತ್ತಿದೆ. ಆದರೆ, ಯುದ್ದದಲ್ಲಿ ಗೆದ್ದವರಿಗಾದರೂ ಲಾಭ, ಸಂತೋಷ ಹೆಮ್ಮೆ ಉಂಟಾದಾವೇ? ಮಾನವತೆಯ ಪಿಡುಗಾದ ಯುದ್ದಕ್ಕೆ, ಯುದ್ದ ದಾಹಕ್ಕೆ ತೀಕ್ಷ್ಣ ವಿರೋಧಿಯಾದ ಈ ಪುಟ್ಟ ಕಾದಂಬರಿ ಹೃದಯದಲ್ಲಿ ಅನಂತ ಕಾಲದವರೆಗೂ ನೆಲೆ ನಿಲ್ಲುವ ಕ್ರಿಸ್ತ ಸಾಮತಿಯಂತಿದೆ ಎಂಬುದನ್ನು ವಿವರಿಸಿದ್ದಾರೆ’.
©2024 Book Brahma Private Limited.