ಇದೊಂದು ಪ್ರೇಮಕಥೆ. ಬದುಕಿನ ಬಗ್ಗೆ ಕಡೆಂಗೋಡ್ಲು ಶಂಕರಭಟ್ಟರು ಅಧ್ಬುತವಾದ ಮಾತುಗಳನ್ನು ಹೇಳಿದ್ದಾರೆ: ‘ನದಿಯ ನೀರು ಹರಿದಂತೆ ಜೀವನದ ನದಿ ಹರಿಯುತ್ತದೆ. ಹೀಗೆ ಹರಿಯುವಾಗ ಏನೇನೋ ಅನುಭವಗಳನ್ನು ಹೊತ್ತು ತರುತ್ತದೆ. ಆಯ್ಕೆ ಮಾಡುವ ಸ್ವಾತಂತ್ರ್ಯ ಯಾರಿಗೂ ಇಲ್ಲ. ಬದುಕನ್ನು ಇದ್ದಂತೆ ಸ್ವೀಕರಿಸುವುದು ಸಹಜ ಧರ್ಮ.’ ಹೌದು ರಾಜೀವ್, ಸುಮಿತ್ರ ಬದುಕನ್ನು ಬಂದಂತೆ ಸ್ವೀಕರಿಸಿದರು. ಆಯ್ಕೆಯ ಸ್ವಾತಂತ್ರ್ಯ ಅವರಿಗೆ ಇರಲಿಲ್ಲ. ‘ನಿನ್ನೊಳಗೆ ನೀ ಹೊಕ್ಕು ನಿನ್ನನ್ನು ನೀ ಕಂಡು ನೀನೆ ನೀನಾಗು ಗೆಳೆಯ’ ಎಂದರು ಬೇಂದ್ರೆ. ತನ್ನ ಬದುಕಿನ ‘ಶ್ವೇತ ಗುಲಾಬಿ’ಯನ್ನು ಕಳೆದುಕೊಂಡ ರಾಜೀವನನ್ನು ಮತ್ತೆ ಯಾರೂ ನೋಡಲಿಲ್ಲ.ಇದು ಕಾದಂಬರಿಯ ಸಾಲುಗಳು.
©2024 Book Brahma Private Limited.