‘ಸ್ಕಾರ್ಲೆಟ್ ಪ್ಲೇಗ್’ ಜಾಕ್ ಲಂಡನ್ ಅವರ ಕಾದಂಬರಿ. ಲೇಖಕ ಚನ್ನಪ್ಪ ಕಟ್ಟಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. 2073ರಲ್ಲಿ ಪ್ರಾರಂಭವಾಗುವ ಇಲ್ಲಿಯ ಕತೆಯನ್ನು ಅವರವತ್ತು ವರ್ಷಗಳ ಹಿಂದೆ ಅಂದರೆ 2013ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದಂತೆ ಕಲ್ಪಿಸಿಕೊಂಡು ಸ್ಕಾರ್ಲೆಟ್ ಪ್ಲೇಗ್ ಸೃಷ್ಟಿಸಿದ ಅನಂತ ಅವಘಡಗಳ ಸರಮಾಲೆಯನ್ನು ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ.
ವಿಸ್ಮಯದ ಸಂಗತಿ ಎಂದರೆ, ಈ ಕಾದಂಬರಿಯನ್ನು ಜಾಕ್ ಲಂಡನ್ ರಚಿಸಿದ್ದು 1912ರಲ್ಲಿ ಸ್ಕಾರ್ಲೆಟ್ ಪ್ಲೇಗ್ ಹೆಸರಿನ ಪಿಡುಗು ನೂರು ವರ್ಷಗಳ ನಂತರ ವಿಶ್ವವನ್ನು ತಲ್ಲಣಗೊಳಿಸಿತು ಎಂದು ಕಲ್ಪಿಸಿ ಬರೆಯಲಾಗಿರುವ ಈ ಕಾದಂಬರಿಯನ್ನು Futuristic Tale ಸಾಹಿತ್ಯ ಪ್ರಕಾರಕ್ಕೆ ಸೇರಿಸಲಾಗಿದೆ. ಸ್ಕಾರ್ಲೆಟ್ ಪ್ಲೇಗ್ ನಂತಹ ಸಾಂಕ್ರಾಮಿಕ ಮಹಾಮಾರಿಯೊಂದಕ್ಕೆ ಮನುಷ್ಯರು ತುತ್ತಾದಾಗ ಅವರ ಎದೆಯ ಪಾತಾಳದಲ್ಲಿ ಅವಿತು ಕುಳಿತಿದ್ದ ನಿಗೂಢ ಹಾಗೂ ವಿಸ್ಮಯಕಾರಿ ರಾಗದ್ವೇಷ, ಹಪಾಹಪಿತನ-ಔದಾರ್ಯ- ಕ್ರೌರ್ಯ- ಕಾರುಣ್ಯಗಳೆಲ್ಲ ಹೇಗೆ ಮುನ್ನೆಲೆಗೆ ಬರುತ್ತವೆ ಎನ್ನುವುದರ ದಟ್ಟ ವಿವರಣೆ ಇಲ್ಲಿದೆ. ಅವೆಲ್ಲ ಅನುಭವಗಳನ್ನು ಯಥಾವತ್ತಾಗಿ ಕಲ್ಪನೆಯ ಪಾತಾಳಗರಡಿಯಿಂದ ಎತ್ತಿ ನಿಗಿ ನಿಗಿ ಕೆಂಡದಂಥ ಕಥನವನ್ನಾಗಿಸಿ ಓದುಗರ ಬೊಗಸೆಯಲ್ಲಿ ಬೀಳುತ್ತದೆ ಈ ಕಾದಂಬರಿ.
‘ಸ್ಕಾರ್ಲೆಟ್ ಪ್ಲೇಗ್’ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ ಹಿರಿಯ ಲೇಖಕ ಚನ್ನಪ್ಪ ಕಟ್ಟಿ ಅವರ ಮಾತು
©2024 Book Brahma Private Limited.