ಮಾನಸಿಕವಾಗಿ ಛಿದ್ರವಾಗಿ ದೈಹಿಕವಾಗಿ ಕ್ಷೋಬೆಗೊಳಗಾದ ಮೃದು ಹುಡುಗಿ ಸಮಾಜವನ್ನು ಎದುರಿಸಬಲ್ಲಳೇ...? ಅವಳಿಗೊಂದು ನ್ಯಾಯ ದೊರಕೀತೇ...? ತನ್ನ ತಪ್ಪಿಲ್ಲದಿದ್ದರೂ... ನಡೆದು ಹೋದ ತಪ್ಪಿಗೆ....?? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತಾ ಈ ಕಾದಂಬರಿಯೂ ಮುಂದೆ ಸಾಗುತ್ತದೆ.ತಿರುನಾರಾಯಣ ಮತ್ತು ಏಕನಾಥೇಶ್ವರ ದೇವಸ್ಥಾನಗಳು.. ಪೂಜೆ.. ಹೊಳೆದಂಡೆ.. ಅಡಿಕೆತೋಟ.. ಹೊಳೆಯೊಂದೇ ಬೇರೆ ಮಾಡಿದ ಹೊಸೂರು ಹೊಸಳ್ಳಿಯ ಪ್ರಶಾಂತ ವಾತಾವರಣದಲ್ಲಿದ್ದರೂ ಒಳಗೆ ಸುಡುತ್ತಿದ್ದ ಬೇಗುದಿಗೆ ಇನ್ನಷ್ಟು ತುಪ್ಪ ಸುರಿಯುವಂತಹ ಜನ...! ಎಲ್ಲಾ ಪರಿಚಿತರೇ...!! ಆದರೂ ಅವರೂ ಸಾಮಾನ್ಯ ಮನುಷ್ಯರಲ್ಲವೇ...? ಹಾಗಂತೇನು ಇಲ್ಲಿನ ಜನ ಸತ್ಯಸಂಧರಲ್ಲ...! ಹೊರಗಿನಷ್ಟು ಇಲ್ಲಿನ ಜನ ಕೆಟ್ಟಿರಲಿಲ್ಲ...!! ಹೀಗೆ ಇಂತಹ ಸಾಲುಗಳನ್ನು ನಮ್ಮಿಂದಲೇ ಓದಿಸಿಕೊಂಡು ಪ್ರಶ್ನೆಗಳೊಂದಿಗೆ ಮುಂದೆ ಸಾಗುವ ಈ ಕೃತಿಯೂ ಉತ್ತರಗಳನ್ನು ತಾವೇ ನೀಡುತ್ತಾ ಈ ಕಾದಂಬರಿಯೂ ಮುಂದೆ ಸಾಗುತ್ತವೆ. ಹತ್ತು ಹಲವು ಪಾತ್ರಗಳ ನಡುವೆಯೂ ಅವಧಾನಿಗಳು ಹಾಸ್ಯ ಮತ್ತು ಸ್ನೇಹಕ್ಕೆ ಹೆಸರಾದವರು; ವ್ಯಕ್ತಿಯ ಜೀವ ಸ್ವತಂತ್ರವಾದರೂ ಜೀವನ....?? ಅದು ಸಮಾಜದ ಪರಿಧಿಯೊಳಗೆ ಇದ್ದು ಸುತ್ತಲಿರುವವರಿಂದ ನಿಯಂತ್ರಿಸಲ್ಪಡಬೇಕಾದ ಪರಿಸ್ಥಿತಿ ಬಂದರೆ....? ಅದನ್ನು ಒಪ್ಪಲಾಗದೆ.... ನಮ್ಮತನವನ್ನು ಬಿಡಲಾಗದೆ... ನೋವನ್ನು ಅನುಭವಿಸುವ ವ್ಯಕ್ತಿಯ ಪಾತ್ರಕ್ಕೆ ಜೀವಕೊಟ್ಟ ತಿರುನಾರಾಯಣನ ಬಗ್ಗೆ, ಹುಟ್ಟಿಬೆಳೆದ ಪರಿಸರದಲ್ಲೇ ಬದುಕು ಕಟ್ಟಿಕೊಳ್ಳುವಲ್ಲಿನ ಸಾರ್ಥಕತೆಯಿಂದಿರುವಾಗಲೇ ವಿಧಿ ತನ್ನ ಪ್ರವರವನ್ನು ಪದರ ಪದರವಾಗಿ ಬಿಚ್ಚುತ್ತಾ ಹೋದಲ್ಲಿ ಮೂಕವೇದನೆ ಅನುಭವಿಸಿದ ಹೆಣ್ಣು ಜೀವ ಮುಗ್ಧ #ಅಹಲ್ಯೆ .... ಕಾಮುಕರ ವಕ್ರದೃಷ್ಟಿಗೆ ಬಲಿಯಾಗಿ ಶೋಷಣೆಗೊಳಗಾಗಿ ಅತ್ಯಾಚಾರ.. ಅನ್ಯಾಯಕ್ಕೆ ಗುರಿಯಾಗಿ ವರ್ಷಗಳ ಕಾಲ ಮನೋನಂದನ ಮಾನಸಿಕ ಆಸ್ಪತ್ರೆಯಲ್ಲಿ ಅಜ್ಞಾತವಾಸದಲ್ಲಿ ಕಳೆದ ಬದುಕು.... !! ಅವಳು ಪಟ್ಟಷ್ಟೇ ನೋವನ್ನು ಅನುಭವಿಸಿದ #ಕ್ಷಿತಿಜನ ಪಾತ್ರ ತಂಗಿ ಮಾನಸಿಕವಾಗಿ ಎದ್ದು ತನ್ನ ಬದುಕಲ್ಲಿ ಗಟ್ಟಿಯಾಗಿ ನಿಲ್ಲಲೆಂದು ಪಣತೊಟ್ಟು ಗೆದ್ದವ... ಅಹಲ್ಯೆಗೆ ಜೊತೆಯಾಗಿ ನಿಂತ #ಪುಟ್ಟ_ಪಾರ್ವತಿಯ ಧೈರ್ಯ ಇವೆಲ್ಲವೂ ಈ ಕಾದಂಬರಿಯ ಹೆಚ್ಚುಗಾರಿಕೆಯಾಗಿವೆ. ಹೀಗೆ ಹಲವು ವಿಷಯಗಳನ್ನು ಚರ್ಚಿಸುತ್ತಾ ಈ ಕೃತಿಯೂ ಮುಂದೆ ಸಾಗುತ್ತವೆ.
©2024 Book Brahma Private Limited.