ಈ ಕಾದಂರಿಯು ಒಬ್ಬ ಮನುಷ್ಯನಿಗೆ ಬದುಕಿನಲ್ಲಿ ಪ್ರೀತಿ ಅನ್ನೋದು ಎಷ್ಟು ಮುಖ್ಯ ಅನ್ನೋದನ್ನ ಈ ಕಾದಂಬರಿಯು ಓದುಗರಿಗೆ ದಾಟಿಸುತ್ತದೆ. ಮನುಷ್ಯ ಅನ್ನದಿಂದಷ್ಟೇ ಬದುಕುವುದಿಲ್ಲ. ಇಂಥದೊಂದು ಮಾತಿದೆ. ಮತ್ತೇನು ಬೇಕಿದೆ? ಪ್ರೀತಿಯೆನ್ನುವ ಜೀವರಸ ಬೇಕಿದೆ. ಪ್ರೀತಿಯೆನ್ನುವುದು ಹರೆಯಕ್ಕೆ ಮಾತ್ರ ಮೀಸಲಲ್ಲ. ಪ್ರೇಮ, ಪ್ರೀತಿ, ಲವಲವಿಕೆ, ಮಾನವ ವಿಕಾಸಕ್ಕೆ ಪ್ರಕೃತಿ ಎಸಗಿದ ಚಮತ್ಕಾರ. ಅದು ಸದಾ ಕಾಲ ನವನವೀನವೇ. ಬಹುಶಃ ಪ್ರೇಮ ಹಳತಾದ ದಿನ ಜಗತ್ತಿನಲ್ಲಿ ಶೂನ್ಯ ಆವರಿಸಿಬಿಡಬಹುದೇನೋ!? ತನಗೆ ಸೇರಿದ್ದು ತನ್ನದಾದುದೆಲ್ಲವನ್ನೂ ಪ್ರೀತಿಸುವುದು ಅಕ್ಕರೆ ತೋರುವುದು ಮನುಷ್ಯ ಸ್ವಭಾವ. ಕಾಗೆ ಕೂಡ ತನ್ನ ಮರಿಯನ್ನು ಕೋಗಿಲೆಯೆಂದು ಹೇಳಿಕೊಂಡು ಹೆಮ್ಮಪಟ್ಟುಕೊಳ್ಳುತ್ತೆ. ಇಂಥ ಎಷ್ಟೋ ರಹಸ್ಯಗಳನ್ನು ಪ್ರಕೃತಿ ಅಡಗಿಸಿಕೊಂಡಿದ್ದರೂ, ಅದರ ಮೂಲಸೆಲೆ ಪ್ರೇಮ. ನಿಜವಾದ ಪ್ರೇಮ ಸರ್ವಕಾಲಿಕ ಸತ್ಯ. ಕೆಲವರ ಜೀವನದಲ್ಲಿ ಪ್ರೇಮ ಪೂರ್ಣ ಪ್ರಮಾಣದಲ್ಲಿ ಸಾರ್ಥಕ ಭಾವ ಪಡೆದುಕೊಳ್ಳುತ್ತೆ. ಇಂಥ ಪ್ರೇಮದ ವ್ಯಾಖ್ಯಾನ ಸುಲಭವಲ್ಲ.
©2024 Book Brahma Private Limited.