ತೆಲುಗು ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ ಅವರ ಕಾದಂಬರಿ-ಪ್ರಾರ್ಥನ. ಲೇಖಕ ವಂಶಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಸಂಬಂಧಗಳ ಮೌಲ್ಯಗಳನ್ನು ಹೇಳುವ ಕೃತಿ ಇದು. ಮಹಾಮಾರಿಯಾದ ಕ್ಯಾನ್ಸರ್ ಕಾಯಿಲೆಯ ಹುಟ್ಟು ಬೆಳವಣಿಗೆಗಳು, ಈ ರೋಗ ನಿರ್ಮೂಲನೆಗೆ ನಡೆದ ಔಷಧಿಗಳ ಪತ್ತೆ ಕಾರ್ಯ, ಹೊಸ ಹೊಸ ಔಷಧಿಗಳ ತಯಾರಿಕೆ, ಈ ಂಧ್ಯೆ ಎದುರಾಗುವ ತೊಡಕುಗಳು, ಔಷಧಿ ಮಾರಾಟದ ವ್ಯಾಪಾರೀಕರಣ, ಮೌಲ್ಯ ಕಳೆದುಕೊಳ್ಳುತ್ತಿರುವ ಆಸ್ಪತ್ರೆಗಳು, ಔಷಧಿಗಳ ದರದಲ್ಲಿ ನಿಯಂತ್ರಣವಿಲ್ಲದಿರುವುದು, ಇಲ್ಲಿ ಸರ್ಕಾರದ ಅಸಹಾಯಕತೆ, ದೇಶದ ಮೂಲಭೂತ ಸಮಸ್ಯೆಗಳಾದ ಆರೋಗ್ಯ… ವೈದ್ಯಕೀಯ ಕ್ಷೇತ್ರಗಳಲ್ಲಿ ಸರ್ಕಾರಿ ಸ್ವಾಮ್ಯ ಖಾಸಗೀಕರಣಕ್ಕೊಳಪಟ್ಟಾಗ ಅದು ವಾಣಿಜ್ಯೀಕರಣವಾಗುತ್ತದೆ. ಆಗ ಅದರ ಸದುದ್ದೇಶಗಳಿಗೆ ಬೆಲೆ ತೆರುವುದು ಪ್ರಜೆಗಳು ಅಥವಾ ಜನಗಳು ಎಂಬ ಸಂದೇಶ ನೀಡುವ ಕಾದಂಬರಿ ಇದು.
©2024 Book Brahma Private Limited.