ಅಲ್ಬರ್ಟ್ ಕಮು ಅವರ ಪ್ರಸಿದ್ಧ ಕಾದಂಬರಿ ಪ್ಲೇಗ್ ಅನ್ನು ಲೇಖಕ-ವಿಮರ್ಶಕ ಎಚ್.ಎಸ್. ರಾಘವೇಂದ್ರರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. 1947ರಲ್ಲಿ ಬರೆದ ಈ ಕಾದಂಬರಿಯ ವಸ್ತು ಮೊದಮೊದಲು ಅತ್ಯಂತ ಲಘುವಾಗಿ ಪರಿಗಣಿಸಲಾಗಿತ್ತು. ಈ ಕುರಿತು ಅಲ್ಬರ್ಟ್ ಕಮು ಈ ಮೊದಲೇ ಹೇಳಿದಂತೆ ಮುಂದೊಂದು ದಿನ ಇದರ ಮಹತ್ವ ತಿಳಿಯುತ್ತದೆ ಎಂದು. ಪ್ಲೇಗ್ ಮಾರಿಗೆ ಮನುಷ್ಯ ಪ್ರತಿಕ್ರಿಯಿಸಿದ ರೀತಿ ಹಾಗೂ ಭವಿಷ್ಯದಲ್ಲಿ ಇಂತಹ ಮಾರಿಗಳನ್ನು ಎದುರಿಸುವ ಮುಂಜಾಗ್ರತೆ-ದೃಷ್ಟಿಕೋನ, ಮಾರಿಯ ದುರ್ಲಾಭ ಪಡೆಯುವ ಮನುಷ್ಯರ ದುರಾಸೆ, ಧರ್ಮಗುರುಗಳ ನಯವಂಚಕತನ ಎಲ್ಲವೂ ಕಾದಂಬರಿಯ ವಸ್ತುಗಳಾಗಿ ಅದರ ಸಮೃದ್ಧತೆಯನ್ನು ಹೆಚ್ಚಿಸಿವೆ. ದೇವರನ್ನುನಂಬುವ ಅನಿವಾರ್ಯತೆ ಏನಿಲ್ಲ; ಆದರೆ, ಮಾನವೀಯತೆಯನ್ನು ಉಸಿರಾಗಿಸಿಕೊಂಡರೆ ದೇವರೇ ಬೇಡ. ಮನುಷ್ಯನ ಸಮಸ್ಯೆಗಳಿಗೆ ದೇವರು ಕಾರಣವಲ್ಲ; ಆ ಬಗ್ಗೆ ಇರುವ ಮೌಢ್ಯ ಎಂಬ ಅರಿವು ಮೂಡಿಸುತ್ತದೆ.
ಅಲ್ಜೀರಿಯಾ ದೇಶದ ಒರಾನ್ ನಗರದಲ್ಲಿ (1840) ಏಪ್ರಿಲ್ 16 ರಂದು ಡಾ. ಬರ್ನಾಡ್ ರಿಯೋ ಎಂಬ ಈ ವೈದ್ಯ ನಡೆದುಕೊಂಡು ತನ್ನ ಆಸ್ಪತ್ರೆಗೆ ಹೋಗುವಾಗ ಕಾಲಿಗೆ ಸತ್ತ ಇಲಿ ತಾಗುತ್ತದೆ. ಮರುದಿನ ಬೆಳಗ್ಗೆ ಮತ್ತೆ ಸತ್ತ ಮೂರು ಇಲಿಗಳ ಕಳೇಬರವನ್ನು ಕಂಡ. ಹೀಗೆ ಪ್ಲೇಗ್ ರೋಗದ ಆರಂಭದೊಂದಿಗೆ ಇಡೀ ಮನುಷ್ಯ ಕುಲವನ್ನು ತತ್ತರಿಸುವಂತೆ ಮಾಡುವ ಮೂಲಕ ಕಾದಂಬರಿಯು ಜೀವಂತಿಕೆ ಪಡೆಯುತ್ತದೆ. ಕೇವಲ ಸಾಹಿತ್ಯ ಮಾತ್ರವಾಗಿಯಲ್ಲ; ಮನುಕುಲದ ಅಳಿವು-ಉಳಿವಿನ ಪ್ರಶ್ನೆಯಾಗಿ, ಭವಿಷ್ಯದ ಚಿಂತೆಯಾಗಿ ಓದುಗರನ್ನು ಆವರಿಸಿಕೊಳ್ಳುತ್ತದೆ.
ಅಲ್ಬರ್ಟ್ ಕಮು ಬರೆದ ಒಂದು ಹಳೆಯ ಕಾದಂಬರಿ-ರಶೀದ್
----
ಪ್ಲೇಗ್ ಕೃತಿಯ ವಿಮರ್ಶೆ
ಸಂಕಷ್ಟದಲ್ಲೂ ಬದುಕುವ ಕಲೆ ಕಲಿಸುವ ಕೃತಿ
ಕೋವಿಡ್ ಎಂಬ ಅನಿರೀಕ್ಷಿತ ಶತ್ರುವಿನ ದಾಳಿಯಿಂದ ಇಡೀ ಜಗತ್ತು ನಲುಗಿದೆ. ಇದರ ಬೆಂಕಿ ಕ್ಷೀಣಿಸಿದ್ದರೂ ಹೊಗೆ ಇನ್ನು ನಿಂತಿಲ್ಲ. ಅಗಲಿಕೆ, ನೋವು, ಕಣ್ಣೀರು, ಪ್ರಯೋಜನವಿಲ್ಲದ ನೆನಪುಗಳ ಜತೆ ಹೊಗೆ, ಭವಿಷ್ಯದ ಕನಸುಗಳಿಗೆ ಸೋಲು, ಸರಕಾರ, ವೈದ್ಯರು, ಆಸ್ಪತ್ರೆಗಳ ಕಾಳಜಿ ಮತ್ತು ಜಡತೆಯ ಹಾಜರಿ, ಇಂತಹ ಪರಿಸ್ಥಿತಿಯಲ್ಲಿ ಬಹುತೇಕ ಕೋಡ್ ನಿಯಮಾವಳಿಗೆ ಅನುಸಾರವಾಗಿ ಜೀವನ ಸಾಗುತ್ತಿದೆ. ನಾವಿರುವ ಈ ಸನ್ನಿವೇಶದಲ್ಲಿ ಫ್ರಾನ್ಸ್‌ನ ಗಣ್ಯ ಲೇಖಕ ಅಲ್ಬರ್ಟ್ ಕಮೂ(೧೯೧೩-೧೯೫೭), ೧೯೪೭ರಲ್ಲಿ ಬರೆದ 'ದ ಪ್ಲೇಟ್' ಕಾದಂಬರಿಯನ್ನು ವಿಮರ್ಶೆ ಮತ್ತು ಅನುವಾದ ವಲಯದಲ್ಲಿ ಎಲ್ಲರಿಗೂ ಆಪ್ತ ಎಂದೆನಿಸಿರುವ ತ್ತು. ಎಚ್.ಎಸ್. ರಾಘವೇಂದ್ರ ರಾವ್ ಅವರು ಕನ್ನಡಕ್ಕೆ ತಂದಿದ್ದಾರೆ. ಪ್ರೊಡಿ. ಎ. ಶಂಕರ್ ನೀ ಕಮೂನ ಕೃತಿ 'ದ ಔಟ್ ಸೈಡರ್' ಅನ್ನು 'ಅನ್ನ' ಎಂಬ ಹೆಸರಿನಲ್ಲಿ ಅನುವಾದ ತ್ತು. ಮಾಡಿದ್ದರು. ಇದು ೧೯೭೦ರಲ್ಲಿ ಹೊರ ಬಂದಿತ್ತು. ೫೦ ವರ್ಷಗಳ ನಂತರ ಫ್ರಾನ್ಸ್ 6 ಲೇಖಕನ ಪ್ಲೇಗ್ ಕೃತಿ ಕನ್ನಡಿಗರ ಕೈ ಸೇರಿದೆ. ಶ್ರೇಷ್ಠ ಕೃತಿಗಳು ಎಲ್ಲ ಕಾಲಕ್ಕೂ ಸಲ್ಲುವ ಗುಣವನ್ನು ಹೊಂದಿರುತ್ತವೆ. ಕೋವಿಡ್ ಥ ಕೋಟೆಯಲ್ಲಿ ಬಂಧಿಯಾಗಿರುವ ನಮಗೆ ಸಹಜವಾಗಿಯೇ ಬಹುತೇಕ ಇಂಥದ್ದೇ ಸಾಂಕ್ರಾಮಿಕ ತ್ತು. ರೋಗವಾದ ಪ್ಲೇಗ್ ಪ್ರತಿ ಲೋಕವನ್ನು ಈ ಕೃತಿ ಅನಾವರಣಗೊಳಿಸುತ್ತದೆ. ಒಂದು ತುದಿ
ಪ್ಲೇಗ್, ಮತ್ತೊಂದು ಕೋವಿಡ್ ಆಗಿರುವ ಸಂಕದ ಮೇಲೆ ಈ ಕೃತಿ ಓಡಾಡುವಂತೆ ಮಾಡುತ್ತದೆ, ಸ್ವಯಂ ಪರೀಕ್ಷೆಗೆ ದೂಡುತ್ತದೆ. ಕೂರ ವಾಸ್ತವದ ಪರಿಚಯದ ಮೂಲಕ ನಮ್ಮ ಅರಿವನ್ನು ಪಕ್ಕಾ ಆಗಿಸಿ ಇರುವಿನ ಸ್ಥಿತಿಯನ್ನು ಹೇಳುತ್ತದೆ. ಭೂತ, ವರ್ತಮಾನವನ್ನು ನೋಡುವುದಕ್ಕೆ ಹೊಸ ಕಣ್ಣು ನೀಡುತ್ತದೆ. ಸುಲಭ ನಿರ್ಣಯ ಮತ್ತು ವಿವರಣೆಗಳಾಚೆಗೆ ಆತ್ಮವಿಶ್ವಾಸದಿಂದಲೇ ನಮ್ಮೊಳಗೇ ಇರುವ ಸಹಜ ಶಕ್ತಿಯನ್ನು ಸಮಾಜಕ್ಕೆ ಕೊಟ್ಟು ಆ ರೋಗವನ್ನು ಹಿಂದಕ್ಕೆ ಸರಿಸಬೇಕು ಎನ್ನುವ ದೃಷ್ಟಿ, ನಡವಳಿಕೆಯನ್ನು ಪ್ಲೇಗ್ ಕೊಡುತ್ತದೆ.
ಚರಿತ್ರೆಯ ಪ್ರಕಾರ ಮೂವತ್ತು ಬಾರಿ ಪ್ಲೇಗೆ ಬಂದು ಹತ್ತು ಕೋಟಿ ಜನ ಕಾಯಂ ಆಗಿ ಕಣ್ಣು ಮುಚ್ಚಿದ್ದರು. ಎರಡು ಮಹಾಯುದ್ಧ ಹಾಗೂ ಅಮೆರಿಕ ಎಂಬ ದೊಡ್ಡಣ್ಣ ಹಲವು ದೇಶಗಳಲ್ಲಿ ನಡೆಸಿದ ಸಮರಗಳು ಕೂಡ ಸಾಂಕ್ರಾಮಿಕ ರೋಗಗಳನ್ನು ಹೋಲುತ್ತವೆ. ಎಲ್ಲವನ್ನೂ ಕಳೆದುಕೊಂಡವರಿಗೆ ಕದನವಿರಾಮ, ರೋಗ ವಿರಾಮದಿಂದ ಏನು ಪ್ರಯೋಜನ ಎಂಬ ಪ್ರಶ್ನೆ ನಮ್ಮ ಮುಂದೆ ಇದ್ದೇ ಇದೆ. ಈ ಕೃತಿ ಇಂತಹ ವಿಷಮ ಕಾಲಘಟ್ಟದ ಬದುಕನ್ನು ಕಟ್ಟಿಕೊಡುತ್ತದೆ.
“ಪ್ಲೇಗ್ ಎನ್ನುವ ರೂಪಕದ ಮೂಲಕ, ನಾವೆಲ್ಲರೂ ಅನುಭವಿಸಿದ ಉಸಿರು ಕಟ್ಟಿಸುವ ಭಾವಸ್ಥಿತಿಯನ್ನು, ದಿಕ್ಕೆಟ್ಟ ವಾತಾವರಣವನ್ನು ಕಟ್ಟಿಕೊಡಬೇಕು ಎನ್ನುವುದು ನನ್ನ ಅಪೇಕ್ಷೆ.
ಈ ಬರವಣಿಗೆಯು ಯುದ್ಧ ಕಾಲದಲ್ಲಿ ಚಿಂತನೆ, ಮೌನ ಮತ್ತು ನೈತಿಕ ಯಾತನೆಗಳನ್ನು ಹಂಚಿಕೊಳ್ಳುವ ಎಲ್ಲ ಜನರ ಪಡಿಪಾಟಲುಗಳಿಗೆ ಒಡ್ಡಿದ ಪ್ರತಿಮೆಯಾಗಿದೆ"- ಎಂದು ತನ್ನ ಕೃತಿ ಕುರಿತು ಸ್ವತಃ ಕಮೂ ಹೇಳಿಕೊಂಡಿದ್ದಾನೆ.
ಎಚ್‌ಎಸ್ ರಾಘವೇಂದ್ರ ರಾವ್ “ಈ ಕಾದಂಬರಿಗೆ ಯಾವುದೇ ಮಾತುಗಳನ್ನು ಜೋಡಿಸುವ ಅಗತ್ಯವಿಲ್ಲ. ಇದು ದೇಶ, ಕಾಲ, ಭಾಷೆಗಳನ್ನು ಮೀರಿದ ಬರವಣಿಗೆ, ಕೊರೊನಾ ಬ೦ದಿತೆ೦ದು ಇದರ ಮಹತ್ವ ಹೆಚ್ಚಾಗುವುದಿಲ್ಲ. ಹೋಯಿತೆಂದು ಕಡಿಮೆಯಾಗುವುದಿಲ್ಲ,'' ಎಂದಿದ್ದಾರೆ.
ಕ್ಲಾಸಿಕ್ ಕೃತಿಗಳ ಓದು ಲೇಖಕರು ಮತ್ತು ವಿಮರ್ಶಕರು ಹೇಳುವ ತಿರುಳನ್ನೇ ಚಪ್ಪರಿಸಬೇಕೆಂದೇನೂ ಇಲ್ಲ. ಇದರಲ್ಲಿ ಬರುವ ಪಾತ್ರಗಳ ಜೀವನ ಕ್ರಮ ಮತ್ತು ದೃಷ್ಟಿಕೋನ ನಮ್ಮ ಸಮಕಾಲೀನ ಪಾತ್ರ, ನಡವಳಿಕೆಯನ್ನೂ ಪರೀಕ್ಷಿಸಿಕೊಳ್ಳುವುದಕ್ಕೆ ಬದಲಾಯಿಸಿಕೊಳ್ಳುವುದಕ್ಕೆ ಒತ್ತಾಸೆ ನೀಡುತ್ತದೆ. ಈ ಕೃತಿಯ ಬಹುಮುಖ ತಾತ್ವಿಕತೆಯನ್ನು ತಿಳಿಯುವ ಮುಂಚೆ ಇದರ ಕತೆಯ ಹಂದರ ಪರಿಚಯ ಮಾಡಿಕೊಳ್ಳಬೇಕು ಎಂದರೆ ಅದು ಹೀಗಿದೆ:
ಓರಾನ್ ಎಂಬ ಸಾದಾ ನಗರದಲ್ಲಿ ಪ್ಲೇಗ್ ಕಾಣಿಸಿಕೊಳ್ಳುತ್ತದೆ. ಇದು ದೇವರು ನೀಡುತ್ತಿರುವ ಕಠೋರ ಶಿಕ್ಷೆ ಎಂದು ಪಾದ್ರಿ ತೀರ್ಪು ಹೇಳುತ್ತಾನೆ, ಆದರೆ ರಿಯೊ ಎಂಬ ವೈದ್ಯ ಇದನ್ನು ಒಪ್ಪುವುದಿಲ್ಲ. ಎಲ್ಲರಿಗೂ ತಜ್ಞ ನಿರ್ದೇಶನವನ್ನೂ ನೀಡುವುದಿಲ್ಲ .ತನ್ನ ಮಾತು ಮತ್ತು ನಡಾವಳಿ ಕುಂದಿಲ್ಲದ ಮಾದರಿ ಎಂದು ಕೂಡ ಹೇಳಿಕೊಳ್ಳದೆ ಚಿಕಿತ್ಸೆಗೆ ತನ್ನನ್ನು ಒಗ್ಗಿಸಿಕೊಳ್ಳುತ್ತಾನೆ. ಸ್ಥಳೀಯ ಆಡಳಿತ ಕೂಡ ಚಿಕಿತ್ಸಾ ಕಾರ್ಯಕ್ಕೆ ಕೈ ಜೋಡಿಸುತ್ತದೆ. 9 ತಿಂಗಳ ನಂತರ ಪ್ಲೇಗ್ ನಿಲ್ಲುತ್ತದೆ. ಹಗಲಿಕೆಯ ನೋವು ಹಗುರವಾಗುತ್ತದೆ. ಅಮುಖ್ಯವಾಗಿದ್ದ ಸಮುದಾಯದ ಬೆಚ್ಚಗಿನ ಮಮತೆಯ ಮಹತ್ವ ಗೊತ್ತಾಗುತ್ತದೆ. ನಮ್ಮ ಜೀವ ಮತ್ತು ಜೀವನವನ್ನೇ ಆಳಿಸಿ ಹಾಕುವ ಸವಾಲನ್ನು ಹೇಗೆ ಸ್ವೀಕರಿಸಬೇಕು ಎಂಬುದರ ಮೂಲಕ ಕಾದಂಬರಿ ಅಂತ್ಯವಾಗುತ್ತದೆ. ರಿಯೊ ಪಾತ್ರ ನಮ್ಮ ವೈದ್ಯ ಕಲ್ಪನೆಯನ್ನೇ ಬದಲಿಸಿ ಈಗಿರುವವರನ್ನು ನೆನೆದು ಆತಂಕ ಹುಟ್ಟಿಸುತ್ತದೆ.
ರಿಯೋ ಸೇರಿದಂತೆ ಹಲವು ಪಾತ್ರಗಳು ನಮ್ಮ ಒಡನಾಡಿಗಳಾಗಿ ಬಿಡುತ್ತವೆ. ಸಿನಿಕತೆಯನ್ನು ಓಡಿಸುತ್ತವೆ. ಎಚ್‌ಎಸ್‌ಆರ್ ಸಂಸ್ಕೃತ ಮಿಶ್ರಿತ ಕನ್ನಡವನ್ನು ಹೆಚ್ಚು ಅವಲಂಬಿಸದೆ ಜನಕನ್ನಡದಲ್ಲಿ ಸಮರ್ಥವಾಗಿ ಅನುವಾದಿಸಿದ್ದಾರೆ.
(ಕೃಪೆ: ಹೊಸಮನುಷ್ಯ, ಬರಹ: ಕೆ.ವೆಂಕಟೇಶ)
©2024 Book Brahma Private Limited.