ನಮ್ರತಾ ಒಂದು ಅದ್ಭುತ ಕಾದಂಬರಿ.ಇಲ್ಲಿನ ಪಾತ್ರಗಳು ಓದಿದ ನಂತರವು ಕಾಡುವಂತವು. ಓದಿ ಪಾತ್ರಗಳನ್ನ ಹೃದಯಕ್ಕಿಳಿಸಿಕೊಂಡು ಮೌನವಾಗಿ ಸಂಭಾಷಣೆ ನಡೆಸುತ್ತಾ,ಪಾತ್ರಗಳ ಕೈಹಿಡಿದು ಹೆಜ್ಜೆ ಹಾಕುತ್ತ ಕಳೆದುಬಿಡಬೇಕು.ಕಾದಂಬರಿಯಾಚೆಗಿನದ್ದೆಲ್ಲ ಗೌಣವಾಗಿ ಮಾತಿನಿಂದ,ಅಕ್ಷರದಿಂದ ನುಣುಚಿಕೊಳ್ಳುತ್ತದೆ.ಸಾಯುಸುತೆಯವರ ಕಾದಂಬರಿಗಳಲ್ಲಿನ ವೈವಿಧ್ಯತೆಗೆ ಈ ಕಾದಂಬರಿಯು ಒಂದು ಉತ್ತಮ ಉದಾಹರಣೆಯಾಗಬಲ್ಲದು.
©2024 Book Brahma Private Limited.