ಡಾ.ಅಶೋಕ್ ಕುಮಾರ್ ಅನುವಾದಿಸಿರುವ ಮಲಯಾಳಂ ಕಾದಂಬರಿ “ಮನುಷ್ಯನಿಗೆ ಒಂದು ಮುನ್ನುಡಿ. ಮೂಲ ಲೇಖಕರು ಸುಭಾಷ್ ಚಂದ್ರನ್. ಮರಣಾನಂತರ ಕಾರ್ಯಗಳು ಮುಗಿದು, ಬಂಧುಗಳು ಮಕ್ಕಳೆಲ್ಲ ತೆರಳಿ ಆ ಫ್ಲಾಟ್ ನಲ್ಲಿ ವಿಧವೆಯಾಗಿ ಒಬ್ಬೊಂಟಿಯಾದ ಮೊದಲ ದಿವಸ, ತನಗೊಬ್ಬಳಿಗೇ ಅಮೂಲ್ಯವೆಂದೆನಿಸಿದ್ದ, ತನ್ನ ಗಂಡ ಕಾಲು ಶತಮಾನದ ಹಿಂದೆ ನೋವುದುಂಬಿದ ತಿರಸ್ಕಾರದಿಂದ ತ್ಯಜಿಸಿದ್ದ ಒಂದು ಹಿಂಡು ಅಕ್ಷರಗಳನ್ನು ಅವಳು ಹುಡುಕಿ ತೆಗೆದಳು. ಒಮ್ಮೆ ಚರಂಡಿ ನೀರಿನಲ್ಲಿ ಒದ್ದೆಯಾದ ಪುಸ್ತಕದ ಕಟ್ಟುಗಳ ಮಧ್ಯದಿಂದ ಅವಳು ಕಾಪಾಡಿ ತೆಗೆದು ಒಣಗಿಸಿ ಜತನವಾಗಿರಿಸಿದ್ದ ಕೆಲವು ಕಾಗದಗಳು ಮತ್ತು ಯೌವನದಲ್ಲಿ ಆತ ಬರೆಯಬೇಕೆಂದು ತೀವ್ರವಾಗಿ ಹಂಬಲಿಸಿದ್ದ ಒಂದು ಪುಸ್ತಕದ ಸಂಕ್ಷೇಪ ರೂಪದ ಟಿಪ್ಪಣಿಗಳೇ ಈ ಕೃತಿ.
©2024 Book Brahma Private Limited.