‘ಜಯ: ಮಹಾಭಾರತದ ಸಚಿತ್ರ ಮರುಕಥನ’ ಭಾರತೀಯ ಪುರಾಣಶಾಸ್ತ್ರಜ್ಞ, ಲೇಖಕ ದೇವದತ್ ಪಟ್ನಾಯಕ್ ಅವರ ಇಂಗ್ಲಿಷ್ ಕೃತಿಯನ್ನು ಲೇಖಕ ಗಿರಡ್ಡಿ ಗೋವಿಂದರಾಜ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ದೇವದತ್ ಪಟ್ನಾಯಕ್ ಅವರು ಪೌರಾಣಿಕ ಕತೆಗಳಿಗೆ ಮೂಲ ಆಧಾರಗಳನ್ನು ಹುಡುಕುತ್ತಾ ಹಲವು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಆ ಕೃತಿಯಲ್ಲಿ ಜಯ ಮಹಾಭಾರತದ ಸಚಿತ್ರ ಮರುಕಥನವೂ ಒಂದು. ಗಿರಡ್ಡಿ ಗೋವಿಂದರಾಜ ಅವರು ಈ ಕೃತಿಯಲ್ಲಿ ಎಲ್ಲಿಯೂ ಅನುವಾದ ಎಂಬ ಅನುಮಾನವೂ ಬರದಂತೆ ತಮ್ಮದೇ ಭಾಷೆಯಲ್ಲಿ ಅತ್ಯಂತ ಸುಂದರವಾಗಿ ಈ ಕೃತಿಯನ್ನು ಅನುವಾದಿಸಿದ್ದಾರೆ. ಜಯ ಎನ್ನುವುದು ಮಹಾಭಾರತದ ಅನುವಾದವಲ್ಲ ಬದಲಾಗಿ ದೇಶಾಧ್ಯಂತ ಹರಡಿಕೊಂಡಿರುವ ವಿಭಿನ್ನ ಮಹಾಭಾರತ ಕತೆಗಳ ಸೊಗಡನ್ನು ಆಧುನೀಕರಿಗೆ ರುಚಿಸುವ ಹಾಗೇ ನಿರೂಪಿಸಲಾಗಿರುವ ಕೃತಿ. ಅದೇ ಸೂಕ್ಷ್ಮ ನಿರೂಪಣೆಯನ್ನು ಕನ್ನಡ ಕೃತಿಯಲ್ಲಿ ಕಾಣಬಹುದಾಗಿದೆ.
©2024 Book Brahma Private Limited.