ಹಂತಕೀ ಐ ಲವ್ ಯೂ!

Author : ರವಿ ಬೆಳಗೆರೆ

Pages 90

₹ 100.00




Published by: ಭಾವನಾ ಪ್ರಕಾಶನ
Address: ನಂ. 2, 80 ಫೀಟ್ ರಸ್ತೆ, ಕದಿರೇನಹಳ್ಳಿ ಪೆಟ್ರೋಲ್ ಪಂಪ್ ಹತ್ತಿರ, ಬನಶಂಕರಿ 2ನೇ ಹಂತ ಬೆಂಗಳೂರು-560070
Phone: 080- 2679 0804

Synopsys

ರವಿ ಬೆಳಗೆರೆಯವರ ಲೇಖನಿಯಿಂದ ಮೂಡಿ ಬಂದಂತಹ ಕಾಲ್ಪನಿಕ ಕಾದಂಬರಿಯಿದು. ಇದನ್ನು ತನಿಖಾ ಕಾದಂಬರಿಯೆಂದು ಕರೆದರೆ ತಪ್ಪಾಗಲಾರದು. ಪಾಲಿ ಎಂಬ ಪೊಲೀಸ್ ಅಧಿಕಾರಿ ನಡೆಸುವ ಕೊಲೆ ಪ್ರಕರಣದ ತನಿಖೆಯ ಸುತ್ತ ಈ ಕಾದಂಬರಿಯ ಕಥಾಹಂದರ ಸಾಗುತ್ತದೆ. ತನಿಖಾ ಕಥಾ ವಸ್ತುವನ್ನು ಇಷ್ಟ ಪಡುವ ಓದುಗರಿಗೆ ರೋಚಕತೆಯೊಂದಿಗೆ ಓದಿಸಿಕೊಂಡು ಹೋಗುವ ಕಾದಂಬರಿ ಇದು. ಕೇವಲ ತನಿಖೆಯಷ್ಟೇ ಅಲ್ಲದೇ, ಒಂದು ಸುಂದರವಾದ ಪ್ರೀತಿಯ ಎಳೆಯನ್ನು ಕೂಡ ಈ ಪುಸ್ತಕದಲ್ಲಿ ರವಿ ಬೆಳಗೆರೆ ಹೆಣೆದಿದ್ದಾರೆ. ಪ್ರೇಮದೊಂದಿಗೆ ಮಿಳಿತವಾಗಿರುವ ತನಿಖೇಯ ದಿಕ್ಕುಗಳನ್ನು ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಈ ಪುಸ್ತಕ ಬರೆಯಲ್ಪಟ್ಟಿದೆ. ಕೊಲೆಯ ಜಾಡನ್ನು ಹಿಡಿದು ಹೊರಟ ಇನ್ಸ್ಪೆಕ್ಟರ್ ಪಾಲಿ ಯಾವ ರೀತಿ ಹಂತಕಿಯನ್ನು ಪತ್ತೆ ಹಚ್ಚುತ್ತಾರೆ ಕುತೂಹಲ ಮೊದಲಿನಿಂದ ಕೊನೇಯವರೆಗೂ ಓದಿಸಿಕೊಂಡು ಹೋಗುತ್ತದೆ. ಕಥೆಯನ್ನು ಅನಗತ್ಯವಾಗಿ ಹಿಗ್ಗಿಸದೇ, ಎಷ್ಟು ಬೇಕೋ ಅಷ್ಟರಲ್ಲೇ ಅಚ್ಚುಕಟ್ಟಾಗಿ ಬರೆದು ಮುಗಿಸಿದಂತಹ ಕಾದಂಬರಿಯಿದು. ಹೊಸ ಓದುಗರಿಗೆ ಕ್ರೈಂ ಕಾದಂಬರಿಗಳಲ್ಲಿ ಆಸಕ್ತಿ ಹುಟ್ಟಲು ಈ ಕಾದಂಬರಿ ಬಹಳಷ್ಟು ಸಹಕಾರಿ.

About the Author

ರವಿ ಬೆಳಗೆರೆ
(15 March 1958 - 13 November 2020)

ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳಗೆರೆ ಅವರು 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದರು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದ ಇವರು ಮೊದಲು ಪ್ರಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದ ಅವರು ಆಮೇಲೆ ತಾವೇ ಸ್ವತಃ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ವಾರಪತ್ರಿಕೆಯು ಓದುಗರ ಮನಗೆದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿತು. ಹಾಯ್ ಬೆಂಗಳೂರು ಪತ್ರಿಕೆಯ ಜೊತೆಗೆ ಓ ಮನಸೇ ಪಾಕ್ಷಿಕ ಪ್ರಾರಂಭಿಸಿದರು. ಶಿವರಾಮ ಕಾರಂತ ...

READ MORE

Related Books