‘ಗುಳ್ಳೆನರಿ’ ಇಂಗ್ಲಿಷ್ ಕಾದಂಬರಿಕಾರ ಡಿ.ಎಚ್. ಲಾರೆನ್ಸ್ ಅವರ ದಿ ಫಾಕ್ಸ್ ಕಾದಂಬರಿಯ ಕನ್ನಡಾನುವಾದ. ಲೇಖಕ ಜಿ. ಎನ್. ರಂಗನಾಥ ರಾವ್ ಅವರು ಈ ಕೃತಿಯನ್ನ ಕನ್ನಡೀಕರಿಸಿದ್ದಾರೆ. “ದಿ ಫಾಕ್ಸ್' ಲಾರೆನ್ಸ್‌ನ ಮೂರುನಾಲ್ಕು ಕಿರು ಕಾದಂಬರಿಗಳಲ್ಲಿ ವಿಮರ್ಶಕರ ವಿಶೇಷ ಗಮನ ಸೆಳೆದಿರುವ ಕೃತಿ, ಜೀವಕೊರಳ ಗೆಳತಿಯರಿಬ್ಬರನ್ನು ಕೇಂದ್ರವಾಗುಳ್ಳ ಈ ಕಾದಂಬರಿಯಲ್ಲಿ ಲಾರೆನ್ಸ್ ಮೊದಲನೆ ಮಹಾಯುದ್ಧದ ಪರಿಣಾಮವಾದ ಅಧಿಕಾರ ಮತ್ತು ಪಾರಮ್ಯಗಳ ನಡುವಣ ದ್ವಂದ್ವ ಹೋರಾಟವನ್ನು ಹೃದಯಂಗಮವಾಗಿ ಚಿತ್ರಿಸಿದ್ದಾನೆ.
ಮಹಿಳೆಯರು ತಮ್ಮ ಜಾಗೃತ ಪ್ರಜ್ಞೆಯನ್ನೂ ಅಲಕ್ಷಿಸಿ ಪುರುಷನಿಗೆ ಶರಣಾಗಬೇಕು ಎನ್ನುವುದೇ ಲಾರೆನ್‌ನ ಧೋರಣೆ ಇರುವಂತಿದೆ ಎಂದು ಸ್ತ್ರೀ ವಿಮೋಚನಾವಾದಿಗಳು “ಗುಳ್ಳೆನರಿ' ಮೇಲೆ ಹರಿಹಾಯ್ದಿರುವುದುಂಟು. ಲಾರೆನ್ಸ್‌ನ ಕೆಲವು ಮಹತ್ವದ ಸಣ್ಣಕಥೆಗಳನ್ನು ಕನ್ನಡಿಗರಿಗೆ ಕೊಟ್ಟಿರುವ ಜಿ.ಎನ್.ರಂಗನಾಥ ರಾವ್ ಅವರ ಮತ್ತೊಂದು ಪಾರದರ್ಶಕ ಸೊಗಸಿನ ಇಂದ್ರಿಯ ಸಂವೇದಿ ಅನುವಾದ “ದಿ ಫಾಕ್ಸ್' - ಗುಳ್ಳೆನರಿ, ಕನ್ನಡದ ಸಹಜ ಸೃಷ್ಟಿಯಂತಿರುವ ಈ ಕೃತಿ ಜಿಎನ್ನಾರ್ ಅವರ ಅನುವಾದ ಸೋಪಜ್ಞತೆ, ಸಾಮರ್ಥ್ಯ ಮತ್ತು ಕೌಶಲಗಳಿಗೆ ದೃಷ್ಟಾಂತವಾಗಿದೆ.
©2024 Book Brahma Private Limited.