‘ಫ್ರಾನ್ಜ್ ಕಾಫ್ಕ ಬದುಕು-ಸಾಹಿತ್ಯ- ಚಿಂತಕ’ ಯೂರೋಪಿಯನ್ ಸಾಹಿತಿ ಅವರ ಬದುಕು-ಸಾಹಿತ್ಯ-ಚಿಂತನೆ ಕುರಿತಾದ ಕೃತಿಯನ್ನು ಲೇಖಕ ಎಲ್.ಎಸ್. ಶೇಷಗಿರಿರಾವ್ ಅವರ ಅನುವಾದ. ಯುರೋಪಿಯನ್ ಸಾಹಿತ್ಯದಲ್ಲಿ ಆಧುನಿಕ ಯುಗವು ಆರಂಭವಾದದ್ದೇ ಫ್ರಾನ್ಜ್ ಕಾಫ್ಕ ಅವರಿಂದ ಎಂಬ ಅಭಿಪ್ರಾಯವಿದೆ. ಕೇವಲ 40 ವರ್ಷ ಕಾಲ ಬದುಕಿದ್ದ ಅವರು ಬರೆದದ್ದು ಮೂರೇ ಕಾದಂಬರಿ ಮತ್ತು ಕೆಲವು ಸಣ್ಣಕತೆ. ಆದರೂ ಯೂರೋಪಿನ ಪ್ರಮುಖ ದಾರ್ಶನಿಕ ವಿವೇಚನೆಯ ಹಿನ್ನೆಲೆಯಲ್ಲಿ ಅವು ತಮ್ಮ ಸ್ಥಾನವನ್ನು ಪಡೆದುಕೊಂಡಿವೆ. ಇಂದು ಕಾಫ್ಕನ ಪ್ರಭಾವ ಜಗತ್ತಿನಾದ್ಯಂತ ವಿಸ್ತರಿಸಿದೆ. ಕನ್ನಡದ ನವ್ಯಸಾಹಿತ್ಯದಲ್ಲಿಯೂ ಇದನ್ನು ಗುರುತಿಸಬಹುದು. ಕಾಫ್ಕನ ಬದುಕು ಬರಹ ಪ್ರತಿಭೆಗಳನ್ನು ವಿಶೇಷವಾಗಿ ದಿ ಟ್ರಯಲ್ ಹಾಗೂ ಮೆಟಮಾರ್ಫಸಿಸ್ ಗಳನ್ನು ಈ ಕಿರುಹೊತ್ತಿಗೆಯಲ್ಲಿ ಸಮಗ್ರವಾಗಿ ವಿಶ್ಲೇಷಿಸಿದ್ದಾರೆ.
©2024 Book Brahma Private Limited.