ಭಾಗ್ಯಳ ತಂದೆ

Author : ಕನಕರಾಜ್ ಆರನಕಟ್ಟೆ

Pages 52

₹ 65.00




Year of Publication: 2023
Published by: ಅಹರ್ನಿಶಿ ಪ್ರಕಾಶನ
Address: ಅಹರ್ನಿಶಿ ಪ್ರಕಾಶನ, ಅಂಚೆ ಕಚೇರಿ ರಸ್ತೆ, ಕೋಟೆ, ಶಿವಮೊಗ್ಗ - 577202
Phone: 9449174662

Synopsys

2022ರ ʻಕುವೆಂಪು ರಾಷ್ಟ್ರೀಯ ಪ್ರಶಸ್ತಿʼ ಪುರಸ್ಕೃತ ಮೊದಲ ತಮಿಳಿನ ಲೇಖಕ ಇಮೈಯಮ್‌ ಅವರ ಕೃತಿಯ ಕನ್ನಡ ಅನುವಾದ ʻಭಾಗ್ಯಳ ತಂದೆʼ. ಕನಕರಾಜ್‌ ಆರನಕಟ್ಟೆ ಅವರು ಕನ್ನಡಕ್ಕೆ ತಂದ ಈ ಪುಸ್ತಕ ಅಪ್ಪ-ಮಗಳ, ಹೆಣ್ಣು ಮತ್ತು ಪರಂಪರಾಗತ ನಂಬಿಕೆಗಳ ನಡುವೆ ನಡೆಯುವ ನೀಳ್ಗತೆಯನ್ನು ಹೇಳುತ್ತದೆ. ಕೇರಿಯ ಹುಡುಗನನ್ನು ಪ್ರೀತಿಸಿದ ತಪ್ಪಿಗೆ ಮಗಳು ಭಾಗ್ಯಳನ್ನು ಕೊಲ್ಲಲು ಮುಂದಾಗುವ ಪಳನಿ ಅನ್ನುವ ತಂದೆ ಹಾಗೂ ಕುಟುಂಬದ ಹೃದಯ ವಿದ್ರಾವಕ ಕತೆ. ಪ್ರೇಮ ಪ್ರಕರಣದಿಂದ ಒಬ್ಬ ಹುಡುಗಿಯನ್ನು ಸಮಾಜ ನೋಡುವ ರೀತಿ, ಆಕೆಯ ಮೇಲೆ ಹೊರಿಸುವ ಆಪಾದನೆಗಳು ಎಲ್ಲವನ್ನೂ ಈ ಕತೆ ಬಹಿರಂಗವಾಗಿ ಸೂಕ್ಷ ದೃಷ್ಟಿಯಲ್ಲಿ ಹೇಳುತ್ತಾ ಹೋಗುತ್ತದೆ. ಮಗಳ ಪಾವಿತ್ರ್ಯದ ಬಗ್ಗೆ ಅನುಮಾನ ಬರುತ್ತಲೇ ಊರಿಗಾದ ಅವಮಾನ ಹಿಂದೆಪಡೆಯಲು ಆಕೆಯ ಸಾವು ಒಂದೇ ಪರಿಹಾರ ಅನ್ನುವ ಜನರ ಹುಚ್ಚು ಆಲೋಚನೆಗಳ ಆಳವನ್ನೂ ಕತೆಯುದ್ದಕ್ಕೂ ಲೇಖಕರು ತೋರಿಸುತ್ತಾರೆ. ಇದು ಇಂದಿಗೂ ಸಮಾಜದಲ್ಲಿ ಹೆಣ್ಣು ಅನುಭವಿಸುತ್ತಿರುವ ಸಂಭವ ಕತೆಗಳೇ ಆಗಿದ್ದು, ಪ್ರಸ್ತುತ ಕೃತಿ ಮಾನವೀಯತೆಯ ಕ್ರೂರತೆಗೆ ಹಿಡಿದ ಕನ್ನಡಿಯಂತಿದೆ.

About the Author

ಕನಕರಾಜ್ ಆರನಕಟ್ಟೆ

ಸಮಕಾಲೀನ ಕನ್ನಡ ಗದ್ಯ ಸಾಹಿತ್ಯದಲ್ಲಿ ಹೊಸ ಹಾದಿಯನ್ನು ಹಿಡಿದಿರುವ ಕನಕರಾಜ್ ಆರನಕಟ್ಟೆ ಮೂಲತ: ಚಿತ್ರದುರ್ಗ ಜಿಲ್ಲೆಯವರು. ಕರ್ನಾಟಕ, ಭಾರತ ಮೊದಲ್ಗೊಂಡು ಹಲವಾರು ದೇಶ, ಭಾಷೆ, ಸಂಸ್ಕೃತಿಗಳ ಮುಖಾಮುಖಿಯಾಗಿಸಿ ಓದುಗರಿಗೆ ಹೊಸದಾದ ಅನುಭವ ನೀಡುವ ಇವರ ಲೇಖನ ಮತ್ತು ಕಥೆಗಳು ಕನ್ನಡ ನವ್ಯೋತ್ತರ ಸಾಹಿತ್ಯದ ಯುವ ಫಸಲು. ಸಾಹಿತ್ಯ ಮಾತ್ರವಲ್ಲದೆ ಸಿನಿಮಾದಲ್ಲೂ ಆಸಕ್ತಿ ಹೊಂದಿರುವ ಇವರು ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದಾರೆ. ಇವರ ಮೊದಲನೇ ಕಿರುಚಿತ್ರ “ಬರ್ಮಾ ಎಕ್ಸ್ ಪ್ರೆಸ್” ಹಲವು ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ಆಯ್ಕೆಗೊಂಡು ನ್ಯೂಯಾರ್ಕ್‍ನ “ಸೌತ್ ಏಷಿಯನ್ ಇಂಟರ್‍ನ್ಯಾಷನಲ್ ಫಿಲ್ಮ್ ಫೆಸ್ಟಿವಲ್” ಮತ್ತು “ರಾಜಸ್ತಾನ ಫಿಲಂ ಫೆಸ್ಟಿವಲ್” ಗಳಲ್ಲಿ ಉತ್ತಮ ...

READ MORE

Related Books