ಬೆಳದಿಂಗಳ ಬಾಲೆ

Author : ವಂಶಿ

₹ 130.00




Year of Publication: 2019
Published by: ಸಾಹಿತ್ಯ ನಂದನ
Address: RJFH+W44, ಎಸ್. ಬಿಂಗಿಪುರ-560105 (ಕರ್ನಾಟಕ)

Synopsys

ತೆಲುಗು ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ ಅವರು ಬರೆದ ಕಾದಂಬರಿಯನ್ನು ಲೇಖಕ ವಂಶಿ ಅವರು ‘ಬೆಳದಿಂಗಳ ಬಾಲೆ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ.

ಈ ಕಾದಂಬರಿಯ ಕಥಾ ನಾಯಕ ರೇವಂತ್ . ಶ್ರೇಷ್ಟ ಚೇಸ್ ಆಟಗಾರ.  ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆದ್ದು ಗ್ರಾಂಡ್ ಮಾಸ್ಟರ್ ಪದವೀಧರ. ಒಂದು ಫೋನ್ ಕಾಲ್ ನಿಂದ ರಷ್ಯಾದ ಒಬ್ಬ ಹುಡುಗಿಯ ಸಂಪರ್ಕ ಬೆಳೆದು ಪ್ರೇಮಕ್ಕೆ ತಿರುಗುತ್ತದೆ. ಇಲ್ಲಿಯ ತಂತ್ರವೆಂದರೆ, ಹುಡುಗಿ ಕಾಣಿಸಿಕೊಳ್ಳದೇ ಕೇವಲ ಫೋನ್ ಕಾಲ್ ನಲ್ಲಿ ಮಾತ್ರ ಸಿಗುತ್ತಾಳೆ. ಭೆಟಿಯಾಗುವ ಎಲ್ಲ ಸಾಧ್ಯತೆಗಳನ್ನು ನಾಯಕ ಹುಡುಕುವಾಗಲು ಅದು ಸಾದಗಯವಾಗುವುದಿಲ್ಲ. ನಾಯಕನ ಸಮಸ್ಯೆಗಳಿಗೆ ಅವಳು ಪರಿಹಾರದ ರೂಪದ ಸಲಹೆ ನೀಡುತ್ತಾಳೆ. ಹೀಗಾಗಿ, ಅವರ ಮಧ್ಯೆ ಪರಸ್ಪರ ಸಮರ್ಪಣಾ ಭಾವವೇ ಸಂಬಂಧದ ಬಂಧವಾಗಿರುತ್ತದೆ. ಈತನಿಗೆ ಬೇಸರವಾದಾಗ ಆಕೆ ಹುರಿದುಂಬಿಸುತ್ತಾಳೆ. ದೂರವಾಣಿಯನ್ನು ಪ್ರಬಲ ಮಾಧ್ಯಮವಾಗಿಸಿ ಕಥೆ ಹೆಣೆದ ಪರಿ ಕಾದಂಬರಿಯ ಆಕರ್ಷಣೆ. 

About the Author

ವಂಶಿ

ಸ್ವತಃ ಪ್ರಕಾಶಕರಾದ ವಂಶಿ ಅವರು ಯಂಡಮೂರಿ ವೀರೇಂದ್ರನಾಥ ಅವರ ಆನಂದೋಬ್ರಹ್ಮ, ಬೆಳದಿಂಗಳ ಬಾಲೆ, ತುಳಸಿ, ಪ್ರಾರ್ಥನೆ, ತುಳಸಿ ದಳ ಇತ್ಯಾದಿ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.      ...

READ MORE

Related Books