ಬಾಮಾ ಎಂಬ ಬರಹನಾಮದಿಂದ ಫಾಸ್ಟಿನಾ ಸೂಸೈರಾಜ್ ಅವರು ತಮಿಳಿನಲ್ಲಿ ಬರೆದ ಆತ್ಮಕಥಾನಕ ‘ಕರುಕ್ಕು’ವನ್ನು ಲಕ್ಷ್ಮೀಹೋಲ್ ಸ್ಟ್ರಾಮ್ ಅವರು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಆ ಕೃತಿಯನ್ನುಡಾ. ಎಚ್.ಎಸ್. ಅನುಪಮಾ ಅವರು ‘ತಾಳೆಗರಿ' ಎಂದು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.
ಕರುಕ್ಕು ಎಂದರೆ ತಾಳೆಗರಿ ಎಂದರ್ಥ. ಮೇಲ್ವರ್ಗದವರ ದೌರ್ಜನ್ಯದಿಂದ ದಲಿತರ ಬದುಕು ಹೇಗೆ ಅನಿವಾರ್ಯವಾಗಿ ಗಾಯಗೊಳ್ಳುತ್ತಾ, ಮಾಯುತ್ತಾ ಮತ್ತೆ ಗಾಯಗೊಳ್ಳುತ್ತದೆ ಎಂಬುದನ್ನು ತಾಳೆಗರಿಗೆ ಹೋಲಿಸಲಾಗಿದೆ. ಮುಖ್ಯವಾಗಿ ಕ್ರೈಸ್ತ ದಲಿತರ ಬದುಕಿನ ವಿವಿಧ ಆಯಾಮಗಳನ್ನು ಇಲ್ಲಿ ಪರಿಚಯಿಸಿದ್ದಾರೆ.
ಪರಯ್ಯಾ ಪಲ್ಲ–ಚಾಳಿಯಾರ್-ನಾಡಾರ್-ನಾಯ್ಕರ್ ಸಮುದಾಯಗಳು, ಸಮುದಾಯಗಳ ನಡುವಿನ ಅಂತರ್ಸಂಬಂಧಗಳು ಹಾಗು ಬಿಕ್ಕಟ್ಟುಗಳು, ಮಕ್ಕಳ ಶಿಕ್ಷಣ, ದಲಿತರ ನಂಬಿಕೆ,ಜಗಳ, ಪ್ರೇಮ, ಧಾರ್ಮಿಕತೆ, ಕ್ಯಾಥೊಲಿಕ್ ಚರ್ಚಿನ ಪಾದ್ರಿಗಳು, ಸನ್ಯಾಸಿನಿಯರು, ಕ್ರೈಸ್ತ ಕುಟುಂಬಗಳ ಮೇಲೆ ಚರ್ಚಿಗಿರುವ ಹಿಡಿತ, ಕ್ರೈಸ್ತ ಸಮುದಾಯದೊಳಗಿನ ಜಾತಿ ತಾರತಮ್ಯ, ಪೊಲೀಸರ ದೌರ್ಜನ್ಯ, ಕ್ರೈಸ್ತ ಸನ್ಯಾಸಿನಿಯರ ಕಾನ್ವೆಂಟ್ ಲೋಕದ ಒಳಹೊರಗುಗಳ ಕುರಿತು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
©2024 Book Brahma Private Limited.