ಅನ್ನಾ ಕರೆನಿನ

Author : ಜ.ನಾ. ತೇಜಶ್ರೀ

Pages 248

₹ 100.00




Year of Publication: 2016
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560093
Phone: 117 - 23183311, 23183312

Synopsys

19ನೇ ಶತಮಾನದ ಊಳಿಗಮಾನ್ಯ ರಷ್ಯಾದ ಹಿನ್ನೆಲೆಯಲ್ಲಿ ಸಂತ ಪೀಟರ್ಸ್ ಬರ್ಗ್‌ನ ಕುಲೀನ ಮನೆತನಕ್ಕೆ ಸೇರಿದ ’ಅನ್ನಾ ಕರೆನಿನ’  ಬದುಕಿನ ಸೌಂದರ್ಯ ಘನತೆ ಬಿಕ್ಕಟ್ಟುಗಳನ್ನು ತೆರೆದಿಡುತ್ತದೆ. ಸೇಂಟ್ ಪೀಟರ್ ಬರ್ಗ್‌ನ  ಕುಲೀನ ಮನೆತನಕ್ಕೆ ಸೇರಿದ ’ಅನ್ನಾ ಕರೆನಿನ’ಳ ಬದುಕಿನ ಸೌಂದರ್ಯ, ಘನತೆ ಹಾಗೂ ಬಿಕ್ಕಟ್ಟು,  ವರ್ತನೆಯ ಸೂಕ್ಷ್ಮಗಳು, ಮಾನವ ಬದುಕಿನ ಅರ್ಥಪೂರ್ಣತೆ, ವಿಪರ್ಯಾಸ, ದುರಂತ, ರಷ್ಯಾದ ರೈತವರ್ಗ, ಸಿರಿವಂತ ವರ್ಗ, ಆಧ್ಯಾತ್ಮ, ಶಿಕ್ಷಣ, ಸುಧಾರಣೆ, ಮಹಿಳಾ ಹಕ್ಕುಗಳು, ಕುಟುಂಬ, ಮದುವೆ ಮುಂತಾದ ಪ್ರಮುಖ ಅಂಶಗಳ ಕುರಿತು ಈ ಕೃತಿಯಲ್ಲಿ ವಿವರಿಸಿದ್ದಾರೆ. ರಷ್ಯಾದ ಪ್ರಖ್ಯಾತ ಕಾದಂಬರಿಕಾರ ಲಿಯೋ  ಟಾಲ್ ಸ್ಟಾಯ್ ಅವರ ’ಅನ್ನಾ ಕರೆನಿನ’ ಕಾದಂಬರಿಯನ್ನು ತೇಜಶ್ರೀ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. 

About the Author

ಜ.ನಾ. ತೇಜಶ್ರೀ

ಎಂ.ಎ. (ಇಂಗ್ಲಿಷ್) ಮತ್ತು ಭಾಷಾಂತರ ಡಿಪ್ಲೊಮಾ ಪದವೀಧರೆ ಆಗಿರುವ ತೇಜಶ್ರೀ ಅವರು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಂದು ವರ್ಷ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ 'ಟ್ಯಾಗೋರ್ ಪೀಠ'ದಲ್ಲಿ ಸಂಶೋಧನಾ ಸಹಾಯಕಿಯಾಗಿ ಕಾರ್ಯ ನಿರ್ವಹಿಸಿ‌ದ್ದಾರೆ. ಲಯ, ತಿಳಿಗೊಳ, ಕತ್ತಲೆಯ ಬೆಳಗು, ಅವನರಿವಲ್ಲಿ, ಉಸುಬುಂಡೆ, ಮಾಗಿಕಾಲದ ಸಾಲುಗಳು (ಕವನ ಸಂಕಲನಗಳು) ಭಾರತ ರಾಷ್ಟ್ರೀಯ ಚಳುವಳಿ, ಚೀನಿ ತತ್ವಶಾಸ್ತ್ರದ ಕತೆ, ಕಡಲ ತಡಿಯ ಗುಡಾರ, ಬೆತ್ತಲೆ ಫಕೀರ, ಇರುವೆ ಮತ್ತು ಪಾರಿವಾಳ (ಅನುವಾದಿತ ಕೃತಿಗಳು) ’ನೀನಾಸಂ'ಗಾಗಿ ವೋಲೆ ಸೋಯಿಂಕಾನ ಸಾವು ಮತ್ತು ರಾಜನ ಕುದುರೆ ಸವಾರ' ನಾಟಕದ ಅನುವಾದ. ಕವಿ ರವೀಂದ್ರ, ...

READ MORE

Related Books