ಮಲಯಾಳಂ ಖ್ಯಾತ ಲೇಖಕ ಮೆಯವೇಲಿ ಬಾಬುಜಿ ಅವರ ಮೂಲ ಕೃತಿಯನ್ನು ಲೇಖಕ ಎನ್ನೇಬಿ ಮೋಗ್ರಾಲ್ ಪುತ್ತೂರು ಅವರು ʼಅಗ್ನಿಕುಂಡʼ ಎಂಬ ಶೀರ್ಷಿಕೆಯಡಿ ಅನುವಾದಿಸಿದ್ದಾರೆ. ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ.
ಲೇಖಕ, ಅನುವಾದಕ ಎನ್ನೇಬಿ ಮೊಗ್ರಾಲ್ ಪುತ್ತೂರು ಅವರು ಮೂಲತಃ ಕಾಸರಗೋಡಿನವರು. ಮಂಗಳ ವಾರಪತ್ರಿಕೆಯ ಸಂಪಾದಕರಾಗಿರುವ ಅವರು ಮೂರು ದಶಕಗಳಿಂದ ಪತ್ರಿಕಾ ರಂಗದಲ್ಲಿದ್ದಾರೆ. 'ಬಂಜೆತನ ಬಯಸಿದವಳು' ಇವರ ಚೊಚ್ಚಲ ಕಥಾ ಸಂಕಲನವಾಗಿದ್ದು ಅನುವಾದಕರಾಗಿಯೂ ಗುರುತಿಸಿಕೊಂಡಿದ್ದಾರೆ. ಮಲಯಾಳಂನಿಂದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಕನ್ನಡಕ್ಕೆ ತಂದಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಅವರ ’ರೂತ್ ಮತ್ತು ರಸುಲ್' ನೀಳ್ಗತೆಯನ್ನು ಮಲಯಾಳಂ ಭಾಷೆಗೂ ಅನುವಾದಿಸಿದ್ದಾರೆ. ...
READ MORE