ಭಾಷಾಂತರಗಾರ್ತಿ, ಭಾಷಾ ಸಂಶೋಧಕಿ ತಮಿಳ್ ಸೆಲ್ವಿಅವರು ಕನ್ನಡ ಪ್ರಾಧ್ಯಾಪಕರು. 1969 ಮಾರ್ಚ್ 13 ರಂದು ಜನಿಸಿದ ಅವರು ದ್ರಾವಿಡ ಮೂಲದ “ಕನ್ನಡ-ತಮಿಳು” ಎಂಬ ಸಂಶೋಧನಾ ಕೃತಿ ಹೊರತಂದಿದ್ಧಾರೆ. ತಮಿಳು ಕನ್ನಡ ಸಾಹಿತ್ಯದ ಸಂಬಂಧ (ತಮಿಳಿನಲ್ಲಿ-ಸಂಶೋಧನೆ), ಚೋಳ-ಪಲ್ಲವ-ಶಿಲ್ಪಕಲೆ, ಅಶೋಕ ಮಿತ್ರನ್ ಕಥೆಗಳು (ಭಾಷಾಂತರ), ಸಂಕ್ರಾಂತಿ (ಭಾಷಾಂತರ), ಅತ್ತಿಮಬ್ಬೆ (ಸಂಶೋಧನೆ), ಶ್ರೀಲಂಕಾದ ತಮಿಳು ಕವಿತೆಗಳು, 6, 7, 8 ಮತ್ತು 10ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕಗಳ ಸಂಪಾದನೆ, ನಾನು ಅವನಲ್ಲ ಅವಳು (ಅನುವಾದ). ಕರ್ನಾಟಕ ಲೇಖಕಿಯರ ಸಂಘದ ’ಎಚ್.ವಿ.ಸಾವಿತ್ರಮ್ಮ ದತ್ತಿನಿಧಿ ಬಹುಮಾನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತ” ಲಭಿಸಿದೆ. ಕಾಂತಾವರ ಕನ್ನಡಸಂಘವು ’ಕರ್ನಾಟಕ ಕೆ.ಬಿ.ಜಿನರಾಜ ಹೆಗ್ಡೆ ಸ್ಮಾರಕ 'ಸಾಂಸ್ಕೃತಿಕ ಏಕೀಕರಣ ಪ್ರಶಸ್ತಿ'ಯನ್ನು ಅವರಿಗೆ ನೀಡಿದೆ.