About the Author

ನವೀನ ಗಂಗೋತ್ರಿ ಅವರು ಉತ್ತರಕನ್ನಡ ಜಿಲ್ಲೆಯ ಶೇವಕಾರದವರು . ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ಪಾಣಿನೀಯ ವ್ಯಾಕರಣದಲ್ಲಿ ಉನ್ನತ ಶಿಕ್ಷಣ ಮತ್ತು ಡಾಕ್ಟರೇಟ್ ಗಳಿಸಿದ್ದಾರೆ. ಪ್ರಸ್ತುತ ಕೊಯಮತ್ತೂರಿನ ಅಮೃತ ವಿಶ್ವವಿದ್ಯಾಲಯದ ಅಮೃತದರ್ಶನ ಅಂತಾರಾಷ್ಟ್ರಿಯ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕಾರಾಗಿ ಕಾರ್ಯನಿರ್ವಹಿಸುತಿದ್ದಾರೆ. ಸಂಶೋಧನೆ ಹಾಗೂ ಸಂಶೋಧನ ಮಾರ್ಗದರ್ಶನದ ಹೊರತಾಗಿ ಕನ್ನಡ, ಇಂಗ್ಲೀಷ್ ಮತ್ತು ಸಂಸ್ಕೃತ ಭಾಷೆಗಳಲ್ಲಿ ಸಾಹಿತ್ಯನಿರ್ಮಾಣ ಮತ್ತು ಅನುವಾದದಲ್ಲಿ ಪ್ರವೃತ್ತಿ ಪಡೆದಿದ್ದಾರೆ. ನಾಡಿನ ಪ್ರಮುಖ ದಿನಪತ್ರಿಕೆ ಮತ್ತು ಇತರ ನಿಯತಕಾಲಿಕೆಗಳಲ್ಲಿ ಕಥೆಗಳು, ಲೇಖನಗಳು ಮತ್ತು ಚಿಂತನಗಳು ಪ್ರಕಟವಾಗಿವೆ. ಇದುವರೆಗೆ ಒಂದು ಕವಿತಾಸಂಕಲನ (ಅಂಟಿಕೊಳ್ಳದ ಚಿತ್ರಗಳು), ಒಂದು ಕಥಾ ಸಂಕಲನ (ಸಂಕ) ಮತ್ತು ಮೂರು ಅನುವಾದ ಗ್ರಂಥಗಳು ಪ್ರಕಾಶ ಕಂಡಿವೆ. ಅನುವಾದದ ಸಾಲಿನಲ್ಲಿ ಭೂಷಣಸಾರಗ್ರಂಥದ (ಸಂಸ್ಕೃತವ್ಯಾಕರಣ) ಕನ್ನಡಾನುವಾದ ಹೊಸದು. ''ಕಥಾಗತ' ನೂತನಪ್ರಕಾರದ ಅಕ್ಷರಯತ್ನ

ಕೃತಿಗಳು : ಅಂಟಿಕೊಳ್ಳದ ಚಿತ್ರಗಳು, ಸಂಕ, ಕಥಾಗತ,

 

 

ನವೀನ ಗಂಗೋತ್ರಿ