About the Author

ಎ. ನರಸಿಂಹ ಭಟ್ಟರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಅಡ್ಯನಡ್ಕದವರು. 1931 ಆಗಸ್ಟ್ 20 ರಂದು ಜನನ. ಕಾಸರಗೋಡಿನಲ್ಲಿ ವಾಸ್ತವ್ಯವಿದ್ದರು. ಬಿ.ಇ.ಬಿ.ಟಿ ಹೈಸ್ಕೂಲ್ ಅಧ್ಯಾಪಕ ಪ್ರಶಿಕ್ಷಣ, ಅಧ್ಯಾಪನ ವಿಷಯ ಇಂಗ್ಲಿಷ್ ಮತ್ತು ಸಾಮಾಜಿಕ ಅಧ್ಯಯನ ಮಾಡಿದ್ದರು.  1954 ಜೂನ್ ನಲ್ಲಿ ಸಹಾಯಕ ಹೈಸ್ಕೂಲು ಅಧ್ಯಾಪಕ  ಸೈಂಟ್ ಜೋಸೆಫ್ಸ್ ಹೈಸ್ಕೂಲು ಬಜಪೆ, ಮುನಿಸಿಪಲ್ ಹೈಸ್ಕೂಲ್ ಹೊಸಪೇಟೆ, ಸೈಂಟ್ ಮೈಕಲ್ಸ್ ಹೈಸ್ಕೂಲು ಮಡಿಕೇರಿ, ಗವರ್ನ್‌ಮೆಂಟ್ ಹೈಸ್ಕೂಲು ಕಾಸರಗೋಡು  ಹಾಗೂ ಉಪಜಿಲ್ಲಾ ವಿದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿರುತ್ತಾರೆ. ಡಿವಿಜಿಯವರ ಮಂಕುತಿಮ್ಮನ ಕಗ್ಗ, ಮರುಳಮುನಿಯನ ಕಗ್ಗ ಮತ್ತು ಗೋವಿಂದಪೈಯವರ ಗೊಲ್ಗೊಥಾ ಮತ್ತು ವೈಶಾಖಿ ಕಾವ್ಯಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದರು. ದೇವಮಾನವ ಯೇಸು, ಮಿರ್ದಾನನ ಮಂತ್ರಪುಸ್ತಕ, ದೇವಪ್ರವಾದಿ ಹಾಗೂ ಪಥರಹಿತ ಪಥ ಎಂಬ ಅನುವಾದ ಕೃತಿಗಳನ್ನು ಹೊರತಂದಿದ್ದರು. ಫೂಟ್ಸ್‌ ಅಂಡ್‌ ನಟ್ಸ್ ಎಂಬ ಶೀರ್ಷಿಕೆಯಲ್ಲಿ ನೂರಹದಿನೈದು ಶ್ರೇಷ್ಠ ಕವಿತೆಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದರು. ಎನ್.ಎಸ್.ಎಲ್. ಅವರ ನೂರು ಭಾವಗೀತೆಗಳನ್ನು Singing Sentiments ಎಂಬ ಹೆಸರಿನಲ್ಲಿ ಇಂಗ್ಲಿಷಿಗೆ ಅನುವಾದಿಸಿದ್ದರು. ಅವರು 2022 ಫೆಬ್ರವರಿ 19 ಶನಿವಾರದಂದು ಇಹಲೋಕ ತ್ಯಜಿಸಿರುತ್ತಾರೆ.

ಕೃತಿಗಳು : ವೇದಾಂತ ಪ್ರವೇಶಿಕೆ (2010), ಮಿರ್‍ದಾನ ಮಂತ್ರಪುಸ್ತಕ (2011), ಕೊನೆಯ ಕೊಡುಗೆ ( 2015), ಸರ್ವಶಕ್ತಿಯೂ ನಿನ್ನೊಳಗೇ ಇದೆ ( 2015), ಜ್ಞಾನಪ್ಪಾನ ( 2016), ಸಿರಿಗನ್ನಡ ಗೀತಾಂಜಲಿ ( 2016), ವಂದೇಮಾತರಂ ( 2017), ಗೊಮ್ಮಟ ಜಿನಸ್ತುತಿ ( 2017), ಅನುಕವನ ಸಂಕಲನ ( 2018), ರಾಮದಾಸ ವಚನಗಳು ( 2018), ದೈವಿಕತೆಯ ದಾರಿಯಲ್ಲಿ ( 2019) (ಕನ್ನಡಕ್ಕೆ ಅನುವಾದ), ಮಹಾಜನ (1997), ಬೇಕಲ ರಾಮನಾಯಕ ( 2001), ಐತಿಹ್ಯಗಳ ಅಧ್ಯಾಪಕ ( 2002), ಬೇಕಲ ರಾಮನಾಯಕರ ಸಾಹಿತ್ಯ ಸಂಪುಟ (2002), ಕನ್ನಡ ಪ್ರಾಧ್ಯಾಪಕ ಪ್ರೊ. ಎಮ್ ಮರಿಯಪ್ಪ ಭಟ್ ( 2006), ಜೀವನದಿ (2011), ಐತಿಹ್ಯಗಳ ರಾಜ ಬೇಕಲ ರಾಮನಾಯಕ ( 2016), ಕಾಸರಗೋಡು ತುಳು ಕನ್ನಡ ಸಮಾಚಾರ ವಿಚಾರ ( 2021), ಆದರಣೀಯರು (2021) (ಇತರ ಕೃತಿಗಳು)

 

ಎ. ನರಸಿಂಹ ಭಟ್ಟ

(20 Aug 1931-19 Feb 2022)