ಕಿಶೂ ಬಾರ್ಕೂರು ಕಾವ್ಯನಾಮದಿಂದ ಬರೆಯುವ ಕಿಶೋರ್ ಕುಮಾರ್ ಪೀಟರ್ ಗೊನ್ಸಾಲ್ವಿಸ್ ಕೊಂಕಣಿಯ ಕವಿ ಹಾಗೂ ಲೇಖಕ. ಕೊಂಕಣಿ ಇಂಗ್ಲೀಷ್ ಹಾಗೂ ಕನ್ನಡದಲ್ಲಿ ಕವಿತೆ, ಸಣ್ಣ ಕಥೆ ಹಾಗೂ ವೈಜ್ಞಾನಿಕ ವಿಷಯಗಳ ಮೇಲೆ ಹಲವಾರು ಲೇಖನಗಳನ್ನು ಬರೆದಿದ್ದಾರೆ. ಸಂಗೀತ, ನಾಟಕ ಹಾಗೂ ಸಿನೇಮಾ ಇವರ ಅಭಿರುಚಿಯ ಕ್ಷೇತ್ರಗಳು. ಗಾಯಕರಾಗಿಯೂ ಪ್ರಸಿದ್ಧರಾಗಿರುವ ಇವರ ಪ್ರಕಟಿತ ಸಾಹಿತ್ಯ ಕೃತಿಗಳು ‘ಧಾಕ್ಟ್ಯಾ ದೆವಾಚಿಂ ಭುರ್ಗಿಂ’ (ಕವಿತಾ ಸಂಗ್ರಹ) ಮತ್ತು ‘ರುಪ್ಣಿಂ’ (ಕಥಾಸಂಕಲನ). ‘ರುಪ್ಣಿಂ’ ಪುಸ್ತಕಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿದೆ. ಕವಿತಾ ಟ್ರಸ್ಟಿನ ಮಾಜಿ ಕಾರ್ಯದರ್ಶಿಯಾದ ಕಿಶೂ ಬಾರ್ಕೂರು ಪ್ರಸ್ತುತ ದಾಯ್ಜಿವರ್ಲ್ಡ್ ಮಾಧ್ಯಮ ಸಂಸ್ಥೆಯ ನಿರ್ದೇಶಕ ಹಾಗೂ ಉಡುಪಿ ಘಟಕದ ಮುಖ್ಯಸ್ಥರಾಗಿದ್ದಾರೆ. ಕೊಂಕಣಿಯ ಪ್ರಖ್ಯಾತ ಕತೆಗಾರ, ಕಾದಂಬರಿಕಾರ ಮತ್ತು ಅನುವಾದಕ ದಾಮೋದರ ಮಾವಜೋ ಅವರ 'ಕೃತಿಯನ್ನು ಜೀವಕೊಡಲೇ ? ಚಹ ಕುಡಿಯಲೇ' ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.