ಖ್ಯಾತ ವಿಮರ್ಶಕ-ಲೇಖಕ ಎಸ್.ದಿವಾಕರ್ ಅವರ ‘ಪೋಸ್ಟ್ ಮ್ಯಾನ್’ ಒಂದು ಅನುವಾದಿತ ಕೃತಿ. ರೋಜರ್ ಮಾರ್ತಿನ್ ದ್ಯು ಗಾರ್ ಸಾಹಿತ್ಯದ ಅಸಲು ಕಸಬಿಗೆ ಬದ್ಧನಾಗಿ ಬರೆದ 1937ರಲ್ಲಿ ನೊಬೆಲ್ ಸಾಹಿತ್ಯ ಪ್ರಶಸ್ತಿ ಪಡೆದ ಪ್ರಸಿದ್ಧ ಫ್ರೆಂಚ್ ಲೇಖಕ. ಸುತ್ತಲಿನ ಜಗತ್ತಿನ ಬಗ್ಗೆ ವ್ಯಕ್ತಿನಿರಪೇಕ್ಷ ಶೈಲಿಯನ್ನು ಅನುಸರಿಸಿದಾಗ ಮಾತ್ರ ನಿಜವಾದ ವಾಸ್ತವಿಕತೆಯನ್ನು ಹಿಡಿಯಬಹುದೆಂದ ಈತ ಇನ್ನೊಬ್ಬ ಫ್ರೆಂಚ್ ಲೇಖಕ ಕಮೂನ ದೃಷ್ಟಿಯಲ್ಲಿ “ನಮ್ಮ ಶಾಶ್ವತ ಸಮಕಾಲೀನ”. ಪ್ರಸ್ತುತ ಕಾದಂಬರಿ ಹೊರನೋಟಕ್ಕೆ ತುಂಬ ಗೌರವಾನ್ವಿತರಾಗಿ ಕಾಣುವ, ಆದರೆ ಒಳಗೆ ಅತ್ಯಂತ ಹೀನ ರೀತಿಯಲ್ಲಿ ಬದುಕುತ್ತಿರುವ ಪುಟ್ಟ ಹಳ್ಳಿಯೊಂದರ ಜನರನ್ನು ಅತ್ಯದ್ಭುತ ರೀತಿಯಲ್ಲಿ ಚಿತ್ರಿಸುತ್ತದೆ. ಪ್ರಾಣಿ-ಪ್ರತಿಮೆಗಳ ಮೂಲಕ ಅನಾವರಣಗೊಳ್ಳುವ ಇಲ್ಲಿನ ಪಾತ್ರಗಳ ಭೌತಿಕ, ನೈತಿಕ ವಿಕಲತೆಗಳು ಮನುಷ್ಯನಲ್ಲಿ ಅಂತರ್ಗತವಾಗಿರುವ ಕೆಡುಕನ್ನು ಪ್ರತಿಫಲಿಸುವುದರಿಂದಲೇ ಅವುಗಳಿಗೆ ವಿಶಿಷ್ಟ ರೂಪಕಶಕ್ತಿಯಿದೆ ಎಂಬುದಾಗಿ ಲೇಖಕ ಎಸ್ ದಿವಾಕರ್ ತಮ್ಮ ಕೃತಿಯಲ್ಲಿ ಬರೆದುಕೊಂಡಿದ್ದಾರೆ.
©2024 Book Brahma Private Limited.