ಕನ್ನಡಕ್ಕೆ ಅನುವಾದಿತ ಇರಾನ್ ಮೂಲದ ಲೇಖಕಿಯ ಫ್ರೆಂಚ್ ಗ್ರಾಫಿಕ್ ಕಾದಂಬರಿ. ಇತ್ತೀಚಿಗೆ ಮತ್ತೆ ಕಾಣಿಸಿಕೊಳ್ಳುತ್ತಿರುವ ಸಮಸ್ಯೆಗಳ ಪ್ರತಿಬಿಂಬವೆನ್ನುವಂತೆ ಅಂದಿನ ಕಾಲದ ಕ್ರಾಂತಿ, ರಾಜಾಡಳಿತ ಇಂತಿ ಅಂದಿನ ಹಲವು ಸಮಸ್ಯೆಗಳ ಸುತ್ತ ಸುತ್ತಿ ಗಾಢವಾಗಿ ಪರಿಣಾಮ ಬೀರಿ ಯೋಚಿಸುವಂತೆ ಮಾಡುತ್ತದೆ ಈ ಕೃತಿ. ಮಾರ್ಜಾನ್ ಮಗುವಿನ ಮುದ್ಧತೆ, ಜಗತ್ತು ನೋಡುವ ಯಾವುದೇ ಫಿಲ್ಟರ್ ಇಲ್ಲದ ಪರಿ, ಆಸೆ, ನಂಬಿಕೆಗಳಲ್ಲಾ ಮನದಾಳದಲ್ಲಿ ಕಲ್ಲು ಹಾಕಿ ಅಳಿಸುತ್ತೆ. ಕಪ್ಪು ಬಿಳಿ ಚಿತ್ರಗಳು ಆ ಕಾಲಕ್ಕೆ ಸೆಳೆದುಕೊಂಡು ಬಿಡುತ್ತೆ. ಕತೆಯ ಪಾತ್ರವೇ ಆಗಿದ್ದೇವೆಯೆಂಬ ಹಾಗೆ ಅನಿಸಿಬಿಡುತ್ತೆ. ಭಾವನೆಗಳು ಅಲ್ಲೋಲ ಕಲ್ಲೋಲವಾಗೋದಂತು ಖಂಡಿತ. ಅವಳು ಕಷ್ಟಪಟ್ಟ ಪರಿ ಅನುಭವಿಸಿದ ನೋವು, ದುಃಖಿಸಿದ ಮನಸು ನಮ್ಮದೂ ಎಂಬಂತೆ ಅನುಭವವಾಗುತ್ತದೆ. ಅಂದಿನ ಇರಾನಿನ ಚಿತ್ರಣವನ್ನು ತನ್ನ ಚಿಕ್ಕ ವಯಸ್ಸಿನ ಕಣ್ಣುಗಳಿಂದ ಕಾಣುತ್ತಾ ಬಂದ ಒಂದು ಮನಸಿನ ಕತೆಯಿಲ್ಲಿದೆ. ಒಂದೇ ಸಲ ಕೂತು ಓದಿ ಮುಗಿಸಿಬಿಡಬೇಕು ಅನಿಸಿದರೂ ಅಡೆತಡೆ ಹಾಕಿಕೊಂಡು ಕಾದು ಕೂತು ಓದಿದ ಕೃತಿಯಿದು. ಕೆಲವೊಂದು ಕಾದಂಬರಿಗಳನ್ನು ನಾವು ನಮ್ಮ ಸ್ವಂತವೇ ಎಂದು ಅನುಭವಿಸೋದು ಇದೆಯಲ್ವ? ಅಂತಹದೇ ಇದು. ತುಂಬಾ ಪ್ರೀತಿಸ್ತೀರ ಇದನ್ನ ಖಂಡಿತವಾಗಿಯೂ. ಕನ್ನಡಕ್ಕೆ ಅನ್ನುವುದಕ್ಕಿಂತ ಕನ್ನಡದಲ್ಲೇ ಬರೆದಂತೆ ಅನುವಾದ ಮಾಡಿದ್ದಾರೆ ಲೇಖಕಿ ಪ್ರೀತಿ ನಾಗರಾಜ. ಅಡೆತಡೆಯಿಲ್ಲದೆ ಅನುವಾದವೆಂದು ಭಾವಿಸಿಕೊಳ್ಳದಂತೆ ತುರ್ಜುಮೆ ಮಾಡಿದ್ದಾರೆ ಲೇಖಕಿ. ಓದಲೇ ಬೇಕಾದ ಒಂದು ಅದ್ಬುತವಾಗಿ ಕನ್ನಡಕ್ಕೆ ತರ್ಜುಮೆಯಾದ ಕೃತಿಯೆಂದರೆ ತಪ್ಪಾಗದು.
©2024 Book Brahma Private Limited.