ಫ್ರೆಂಚ್ ಸಾಹಿತ್ಯದಲ್ಲಿ ದಂತಕಥೆಯೇ ಆದ ವಿಕ್ಟರ್ ಹ್ಯೂಗೋ ರಚಿಸಿದ ‘ಲೆ ಮಿಸರಾಬಲ್ಸ್’ (1862) ಎಂಬ ಕಾದಂಬರಿಯ ಆಂಗ್ಲಾನುವಾದವನ್ನು ಜೆ.ಎಲ್. ಫಾರ್‍ಜ ಎಂಬಾತ ಮಾಡಿದ್ದು, ಬೆಳ್ಳಾವೆ ನರಹರಿ ಶಾಸ್ತ್ರಿಗಳು ಕನ್ನಡಕ್ಕೆ ಅನುವಾದಿಸಿದ್ದೇ ಈ ಕೃತಿ-ಪಾಪಿಯ ಪಾಡು.
ಅನ್ಯಾಯ ಎಸಗುವವರಿಗೆ ಕಠಿಣವಾದ ಶಿಕ್ಷೆ ನೀಡುವ ಬದಲು ಅವರನ್ನು ಸಮಾಜಮುಖಿಯಾಗುವಂತೆ ಮಾಡದಿದ್ದರೆ ಅದೂ ಸಹ ಅನ್ಯಾಯ ಎಸಗಿದಂತೆ ಎಂಬುದು ಬಹುಮುಖೀಯ ಕಥಾ ವಸ್ತುಗಳ ಪೈಕಿ ಇದು ಪ್ರಮುಖವಾದದ್ದು.
ಸಮಾಜದಲ್ಲಿ ನಡೆಯುವ ಪ್ರತಿಯೊಂದು ಅನ್ಯಾಯ, ದುರ್ನಡತೆ, ದ್ರೋಹ-ವಂಚನೆ ಹೀಗೆ ಮಾನವ ಸ್ವಭಾವಗಳ ಸರಿಪಡಿಸುವಿಕೆಯೇ ಸಮಾಜದ ಧ್ಯೇಯವಾಗಬೇಕು ಎಂದೂ ಇಲ್ಲಿ ಪ್ರತಿಪಾದಿಸಲಾಗಿದೆ. ಈ ಕಾದಂಬರಿಯಲ್ಲಿ ಕರುಣಾ ರಸವಿದೆ. ಪ್ರತಿ ಸಾಲೂ ಸತ್ಯ -ಅಹಿಂಸೆ ಪ್ರತಿಪಾದಿಸುತ್ತದೆ. ಪ್ರೌಢ ವಾಕ್ ಸರಣಿಯೂ ಇದೆ. ಹೀಗಾಗಿ, 1862ರಲ್ಲಿ ಈ ಕಾದಂಬರಿಯು ಒಂದೇ ದಿನ 12 ಭಾಷೆಗಳಲ್ಲಿ ಅನುವಾದಗೊಂಡಿತ್ತು.
©2024 Book Brahma Private Limited.