ತೆಲುಗು ಕಾದಂಬರಿಕಾರ ಕೊಡವಟಿಗಂಟಿ ಕುಟುಂಬರಾವ್ ಅವರು ಬರೆದ ‘ಚೆದುವು’ ಕಾದಂಬರಿಯ ಕನ್ನಡ ಅನುವಾದ ಕೃತಿ ʻಓದುʼ. ಬಿ. ಸುಜ್ಞಾನಮೂರ್ತಿ ಅವರು ಅನುವಾದಿಸಿದ್ದಾರೆ. 1915-35ರ ವರೆಗಿನ ಕಾಲಘಟ್ಟದ ಆಂಧ್ರದ ರಾಜಕೀಯ-ಸಾಮಾಜಿಕ ಚಾರಿತ್ರಿಕ ವಾಸ್ತವ, ಮಧ್ಯಮವರ್ಗದ ಕುಟುಂಬಗಳು ಬದುಕುವ ವಾತಾವರಣ ಮತ್ತು ಸಂಸ್ಕೃತಿ, ಶಿಕ್ಷಣವಲಯದ ಆಗುಹೋಗುಗಳು ಇವು ಇಲ್ಲಿನ ಕಥೆಯ ಮುಖ್ಯವಸ್ತುಗಳಾಗಿವೆ. ಚಾರಿತ್ರಿಕ ದ್ವಂದ್ವಗಳ ಕಾರಣದಿಂದ, ವಿವಿಧ ಪಾತ್ರಗಳ ನಡುವೆ ಸಹಜವಾಗಿ ಮೂಡುವ ದ್ವಂದ್ವಗಳ ಕಾರಣದಿಂದ ಜ್ಞಾನ ಹೇಗೆ ವೃದ್ಧಿಸುತ್ತದೆ ಅನ್ನುವ ವಿಚಾರವನ್ನು ಕಾದಂಬರಿ ಪರಿಶೀಲಿಸುತ್ತದೆ.
©2024 Book Brahma Private Limited.