ಈ ಕಾದಂಬರಿಯು ಇಪ್ಪತ್ತೊಂದನೇ ಶತಮಾನದ ಈ ಯುಗದಲ್ಲಿ ಹೆಮ್ಮರವಾಗಿ ಬೆಳೆದ, ಮತ್ತು ಈ ತಲೆಮಾರಿನ ಅಗತ್ಯವಾಗುತ್ತಿರುವ ಅಂತರ್ಜಾಲವನ್ನೆ ಮುಖ್ಯವಿಷಯವನ್ನಾಗಿಟ್ಟುಕೊಂಡ ಕಥೆಯನ್ನು ಒಳಗೊಂಡಿದೆ. ಟಿಕೆಟ್ ಬುಕಿಂಗ್‍ನಿಂದ ಹಿಡಿಗು ಬಿಲ್ ಪಾವತಿಯವರೆಗೂ ನಮ್ಮ ಎಲ್ಲಾ ದೈನಂದಿನ ಆಗುಹೋಗುಗಳಲ್ಲಿ ಹೆಚ್ಚಿನವು ಅಂತರ್ಜಾಲದ ಮೂಲಕ ನಡೆಯತೊಡಗಿರುವ ಕಾಲದಲ್ಲಿ ಪ್ರೀತಿ, ಪ್ರೇಮದ ಕತೆಯೇನು? ಅದರಲ್ಲೂ ಅಂತರ್ಜಾಲವು ಗಣನೀಯ ಪಾತ್ರವಹಿಸಿದೆ. ಮ್ಯಾಟ್ರಿಮೊನಿ ಡಾಟ್‌ಕಾಮ್, ಶಾದಿ ಡಾಟ್‌ಕಾಮ್ ಸ್ವಯಂವರ ಡಾಟ್‌ಕಾಮ್‍ಗಳು ಇವೆ. ಸಂಗಾತಿಯ ಆಯ್ಕೆ ಈ ರೀತಿಯಲ್ಲಿ ನಡೆಯುವುದರಿಂದ ಸಹಜ ಪ್ರೀತಿ, ಪ್ರೇಮದ ಕತೆಯೇನು ಎನ್ನುವುದು ಕೆಲವರ ಪ್ರಶ್ನೆ. ಇಂಥ ಬದಲಾವಣೆಯ ನಡುವೆಯು ‘ಬಾಲು, ಸುಜಾತ’ಳಂಥ ಪ್ರೇಮಿಗಳು ಇದ್ದರೆ. ಪ್ರೀತಿ ಎನ್ನುವ ಎರಡು ಅಕ್ಷರ ಮನದಲ್ಲಿ ಬರೆದು ಬರೆದು ಅಳಸಿದರು ‘ಸುಜಾತ’ ಎನ್ನುವ ಮೂರು ಅಕ್ಷರ ಬಾಲುವಿನ ಮನದಲ್ಲಿ ನಿಂತು ಶೃತಿಯ ತರಂಗಗಳನ್ನು ಎಬ್ಬಿಸುತ್ತೆ. ಪ್ರೇಮ ಹುಚ್ಚು ಪ್ರವಾಹವಲ್ಲ ನವಿರಾದ ಅನನ್ಯತೆಯ ರಸಧಾರೆ.ಇದು ಈ ಕಾದಂಬರಿಯ ಮುಕ್ತಾದಲ್ಲಿರುವ ಪಂಕ್ತಿಗಳು.
©2024 Book Brahma Private Limited.