ಮರಾಠರು ಹಾಗೂ ಬ್ರಿಟಿಷ್ ಆಡಳಿತಗಾರರ ಮಧ್ಯೆ ಇದ್ದ ಸಂಬಂಧ ಹಾಗೂ ತದನಂತರ ಅದು ಹೇಗೆ ಕಳಚಿಕೊಂಡಿತು ಎಂಬ ವಿವರಗಳೊಂದಿಗೆ ಬರೆದ ಐತಿಹಾಸಿಕ ಕಾದಂಬರಿ ಇದು-ಮರಾಠರೂ ಇಂಗ್ಲಿಷರೂ. ಮರಾಠ ಸಾಹಿತಿ ನ.ಚಿ. ಕೇಳಕರ್ ಅವರ ಮರಾಠಿ ಕಾದಂಬರಿ. ಇದನ್ನು ಲೇಖಕ ಭಿ.ಪ. ಕಾಳೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದೇ ಕಥಾ ವಸ್ತುವನ್ನು ಇಟ್ಟುಕೊಂಡು ಲೇಖಕ ಭಿ.ಪ. ಕಾಳೆ ಅವರು 1 ಹಾಗೂ 2 ಭಾಗಗಳನ್ನು ಬರೆದಿದ್ದು, ಪ್ರಸ್ತುತ ಕೃತಿಯು ಮೂರನೇ ಭಾಗವನ್ನು ಪೂರ್ಣಗೊಳಿಸಿದೆ.
ಶೌರ್ಯ-ಧೈರ್ಯ-ಉದಾತ್ತ ಜೀವನ, ರಾಷ್ಟ್ರೀಯತೆ, ಸಾಹಸ-ಶಿಸ್ತು ಇಂತಹ ಯಾವುದೇ ಮೌಲ್ಯದಲ್ಲಿ ಮರಾಠರೂ ಹಿಂದೆ ಬಿದ್ದಿರಲಿಲ್ಲ. ಪೇಶ್ವ ಮಾಧವರಾಯರ ಕಾಲದವರೆಗೂ ಇದೇ ಮನಸ್ಥಿತಿಯವರಾಗಿದ್ದರು. ಆದರೆ, ತದನಂತರದ (1800 ಆರಂಭ) ಕಾಲದಲ್ಲಿ ಮರಾಠರಲ್ಲೇ ಕೆಲ ಸ್ವಾರ್ಥಿಗಳು ತಮ್ಮ ಬೇಳೆಯ ಬೇಯಿಸಿಕೊಳ್ಳಲು ಮರಾಠರ ವಿರುದ್ಧವೇ ನಡೆಸಿದ ಕಾರಸ್ಥಾನದಿಂದ ಮರಾಠರಲ್ಲಿಯ ಐಕ್ಯತೆ ಕಡಿಮೆಯಾಗುತ್ತಾ ಬಂದಿತು. ಮರಾಠಶಾಹಿ ಅವನತಿ ಕಂಡಿತು. ಇಂತಹ ಸಂಗತಿಗಳನ್ನು ಒಳಗೊಂಡ ಕಾದಂಬರಿ ಇದು.
©2024 Book Brahma Private Limited.