ತೆಲುಗು ಮೂಲದ ಗುಡಿಪಾಟಿ ವೆಂಕಟಾಚಲಂ ಅವರು ಬರೆದಿರುವ ಕಾದಂಬರಿಯನ್ನು ರಮೇಶ ಆರೋಲಿ ಅವರು ಕನ್ನಡೀಕರಿಸಿದ್ದಾರೆ. ಜಾತಿ ಜಾತಿಗಳ ನಡುವಿನ ಕಂದಕಗಳನ್ನು ಮುಚ್ಚಿ ಅವುಗಳ ಮೇಲೆ ಕಾಲಿರಿಸಿ ದಾಟುವುದು ಕಷ್ಟದ ಕೆಲಸವೇ ಸರಿ. ಆದರೆ ಹೆಣ್ಣು ತನ್ನ ಮನದ ಬಯಕೆಯನ್ನು ಅದುಮಿಟ್ಟುಕೊಂಡು ನರಳುವುದು ಎಷ್ಟು ಸರಿ. ತಪ್ಪು! ಹೆಣ್ಣಿನ ಮನಸ್ಸನ್ನು ಗಂಡನಾದವನು ಅರಿಯಬೇಕು. ಬದುಕಿನ ಜಂಜಾಟದಲ್ಲಿ ಹೆಣ್ಣನ್ನು ಕೇವಲ ವಂಶೋಧ್ದಾರಕಕ್ಕೆ ಮಕ್ಕಳನ್ನು ಹೆರುವ ಯಂತ್ರ ಹಾಗೂ ಮನೆಕೆಲಸಕ್ಕೆ ನೇಮಿಸಿದ ಆಳಿನಂತೆ ಕಂಡರೆ ಅವಳ ಮನದಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರವಿಲ್ಲದೇ ಕೊರಗುತ್ತಾರೆ. ಈ ವಿಷಯವನ್ನಿಟ್ಟುಕೊಂಡು ಸೂಕ್ಷ್ಮವಾಗಿ ಕಾದಂಬರಿಯನ್ನು ಹೆಣೆಯಲಾಗಿದೆ. ಇದು ಕೇವಲ ಕಾದಂಬರಿ ಎನಿಸದೇ ತನ್ನದೇ ಮನೆ ಅಥವಾ ನೆರೆಹೊರೆಯವರ ಕಥನವೆನಿಸಿದರೆ ತಪ್ಪಾಗಲಾರದು.
©2024 Book Brahma Private Limited.