ಮರಾಠಿಯ ಪ್ರಮುಖ ಗದ್ಯಲೇಖಕ, ಲೋಕಶಾಹಿರ್ ಎಂದೇ ಪ್ರಖ್ಯಾತರಾಗಿದ್ದ ಅಣ್ಣಾಭಾವು ಸಾಠೆ ಅವರ ಮುಖ್ಯ ಕಾದಂಬರಿಗಳಲ್ಲಿ ಇದೂ ಒಂದು. ಈ ಕಾದಂಬರಿಯಲ್ಲಿ ಅಣ್ಣಾಭಾವು ಸಾಠೆಯವರು ತಮ್ಮ ಊರು ವಾಟೆಗಾಂವದಲ್ಲಿನ ಸಾಂಪ್ರದಾಯಿಕ ಜಾತ್ರೆಯ ಸುತ್ತ ಜರುಗುವ ಪ್ರಸಂಗವನ್ನು ಕಾದಂಬರಿಯಾಗಿಸಿದ್ದಾರೆ. ಅಲ್ಲದೇ ಈ ಇಡೀ ಕಥೆಯಲ್ಲಿ ದಲಿತ, ದಮನಿತರೇ ಮುಖ್ಯ ಪಾತ್ರಗಳಾಗಿ ವಿಜೃಂಭಿಸುವಂತೆ ಮಾಡಿದ್ದಾರೆ. ಸ್ವಾತಂತ್ರೋತ್ತರ ಭಾರತದಲ್ಲಿನ ಭ್ರಷ್ಟ ಹಾಗೂ ದಮನಕಾರಿ ಆಡಳಿತ ವ್ಯವಸ್ಥೆಯ ವಿರುದ್ಧ ಕಿಡಿಕಾರಿದ್ದಾರೆ. ಲೋಕಾನುಭಗಳನನು ಹಿಡಿದು ಕಥೆಕಟ್ಟುವ ಕಲೆಯಲ್ಲಿ ಪಾರಂಗತರಾಗಿದ್ದ ಸಾಠೆಯವರ ಲೇಖನಿಯು ನೀಡಿದ ಮಹತ್ವದ ಪಾತ್ರಗಳಲ್ಲಿ ಫಕೀರಾ ಕೂಡ ಒಬ್ಬ. ಫಕೀರಾ ಬಿಸಿರಕ್ತದ ಯುವಕನಾಗಿ ಇಡೀ ಕಥೆಯಲ್ಲಿ ಧೈರ್ಯ, ಸಾಹಸ, ಸದ್ವಿವೇಕ ಬುದ್ಧಿ ಹಾಗೂ ತ್ಯಾಗವನ್ನು ಪ್ರದರ್ಶಿಸುತ್ತಾನೆ. ಮನೆಗೊಬ್ಬ ಫಕೀರಾ ಹುಟ್ಟಬೇಕು ಎನ್ನುವಷ್ಟು ಜನಪ್ರಿಯನಾಗುತ್ತಾನೆ. ಮರಾಠಿಯ ಫಕೀರಾ ಕೃತಿಯನ್ನು ಅದೇ ಹೆಸರಿನಲ್ಲಿ ಅನುವಾದಿಸಲಾಗಿದೆ. ಮರಾಠಿಯ ಗ್ರಾಮೀಣ ಪರಿಸರದ ಭಾಷೆಯನ್ನು ಕನ್ನಡೀಕರಿಸುವ ಸಂದರ್ಭದಲ್ಲಿಯೂ ಹಳ್ಳಿಯ ಸೊಗಡಿನ ಹಾಗೂ ಜನಾಂಗೀಯ ಭಾಷೆಯ ಸ್ವರೂಪವನ್ನು ಹಾಗೇ ಉಳಿಸಿಕೊಳ್ಳಲಾಗಿದೆ.
©2024 Book Brahma Private Limited.