ನಾವು ಅಂದುಕೊಂಡಂತೆ ಬದುಕು ಮುಂದುವರೆಯಲು ಸಾಧ್ಯವೇ? ಬದುಕು ನಡೆಸಿದಂತೆ ನಾವು ನಡೆಯಬೇಕು…! ಘಟಿಸುವ ಆಕಸ್ಮಿಕ ಘಟನೆಗಳು ಮುಂದುವರಿಕೆಯ ಮರುಹುಟ್ಟು ಪಡೆದರೆ ಮಾನಸಿಕವಾಗಿ ಕುಗ್ಗಿಬಿಡುವ ಪರಿಸ್ಥಿತಿ ವೈಯುಕ್ತಿಕ ಹಾಗೂ ಸಮಾಜದ ಸ್ವಾಸ್ಥ್ಯಕ್ಕೆ ಎಂದೂ ಪೂರಕವಾಗಿರುವುದಿಲ್ಲ… ಇಂತಹ ಚಿಕ್ಕಪುಟ್ಟ ವಸ್ತುಸ್ಥಿತಿಗಳ… ಅದನ್ನ ಅವಲಂಭಿಸಿರುವ ಮನಸ್ಥಿತಿಗಳ ಪೂರ್ಣಫಲವೇ ಈ “ಆನಂದಯಜ್ಞ.” ಎಂಬ ಈ ಕಾದಂಬರಿ ಈ ಕಾದಂಬರಿಯಲ್ಲಿ ತುಂಬಾ ಕಾಡಿದ ಪಾತ್ರಗಳಲ್ಲಿ ಒಂದು ಆನಂದಮೂರ್ತಿಗಳು… ಮತ್ತೊಂದು ಅಭಿನಂದನ್… ಇಬ್ಬರ ಯೋಚನೆ ಒಂದೇ ಆದರೆ ದಿಕ್ಕುಗಳು ಬೇರೆ… ಅವಲಂಭಿತ ಪರಿಸರಗಳು ಬೇರೆ…ಅನುಭವಿಸುವ ಹತಾಷೆಗಳಿಗೆ ಜೀವನದೃಷ್ಟಿ ಕೋನದಲ್ಲಿ ಕಂಡುಕೊಂಡ ಅನುಭವಗಳಾಗಬೇಕು… ಅದರಂತೆ ಅಮಲಳಿಂದ ಅರಿತ ಪಾಠವೆಂದರೆ “ಬದುಕಿನಲ್ಲಿ ಅಭಿಪ್ರಾಯಗಳನ್ನು ಬದಲಿಸಬಹುದು ಆದರೆ ನಿರ್ಧಾರಗಳನ್ನಲ್ಲ” …ಹೀಗೆ ಹಲವು ಮಹತ್ವದ ವಿಷಯಗಳನ್ನು ಈ ಕಾದಂಬರಿಯೂ ಓದುಗರಿಗೆ ತಿಳಿಯ ಪಡಿಸುತ್ತದೆ.ಬದುಕು ಒಂದು ಯಜ್ಞ… ಅದು ಆನಂದದೆಡೆಗಿನ ಯಜ್ಞ … ಬರುವ ನೋವು, ನಿರಾಸೆ, ಪರಿತಾಪ, ಒತ್ತಡ ಎಲ್ಲವನ್ನೂ ಮೀರಿ ನಿಂತು ಎಲ್ಲರಲ್ಲಿ ನಮ್ಮನ್ನು ಕಂಡುಕೊಳ್ಳುವುದೇ “ಆನಂದಯಜ್ಞ”…
©2024 Book Brahma Private Limited.