ದಿ. ರಾಮಚಂದ್ರ ದೇವ ಅವರು ವಿಮರ್ಶಾ ಲೋಕಕ್ಕೆ ಕೊಟ್ಟ ಕೊಡುಗೆ ಅಪಾರ. ಪಾಶ್ಚಾತ್ಯ ಸಾಹಿತ್ಯದ ಅವರ ಅಧ್ಯಯನ ಕನ್ನಡ ಸಾಹಿತ್ಯದ ಬೆಳವಣಿಗೆಯ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಶೇಕ್ಸ್‌ಪಿಯರ್ ಕುರಿತಂತೆಯೂ ಹಲವು ವಿಮರ್ಶಾತ್ಮಕ ಬರಹಗಳನ್ನು ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟಿದ್ದಾರೆ. ಶೇಕ್ಸ್‌ಪಿಯರ್‌ನ ಕೃತಿಗಳ ಅನುವಾದದ ಸಮಸ್ಯೆ, ಅದು ಭಾರತೀಯ ಭಾಷೆಗಳಿಗೆ ಬರುವಾಗ ಎದುರಿಸುವ ಬಿಕ್ಕಟ್ಟು, ಭಾಷೆಯಿಂದ ಭಾಷೆಗೆ ಹೇಗೆ ಶೇಕ್ಸ್‌ಪಿಯರ್ ಪಾತ್ರಗಳು ತನ್ನ ಗುಣಲಕ್ಷಣಗಳನ್ನು ಬದಲಿಸುತ್ತಾ ಹೋಗುತ್ತವೆ ಎನ್ನುವುದನ್ನು ಕುತೂಹಲಕರವಾಗಿ ರಾಮಚಂದ್ರ ದೇವ ಈ ಕೃತಿಯಲ್ಲಿ ವಿವರಿಸಿಸಿದ್ದಾರೆ. 19ನೇ ಶತಮಾನದಲ್ಲಿ ತನ್ನೊಳಗೇ ಮುಳುಗಿ ಹೋಗಿದ್ದ ಅವನತಿಗೊಂಡ ಹಿಂದೂ ಯೋಚನಾ ಕ್ರಮದ ಗಾಢ ಪ್ರಭಾವದಲ್ಲಿದ್ದ ಭಾರತೀಯ ಸಂಸ್ಕೃತಿ ಪರಕೀಯವಾದ ಇಂಗ್ಲಿಷ್ ಸಂಸ್ಕೃತಿಗೆ ತನ್ನನ್ನು ತೆರೆದುಕೊಂಡಾಗ ಏನೇನು ಸಮಸ್ಯೆಗಳನ್ನು ಎದುರಿಸಿತು ಎಂಬುದನ್ನು ಶೇಕ್ಸ್‌ಪಿಯರ್‌ಗೆ ಸಂಬಂಧಿಸಿದಂತೆ ನೋಡಲು ಲೇಖಕರು ಪ್ರಯತ್ನಿಸಿದ್ದಾರೆ. ಪರಕೀಯ ಭಾಷೆಗಳ ಸಾಹಿತ್ಯಗಳನ್ನು ಅನುವಾದ ಮಾಡುವುದು ಹೇಗೆ ಈ ದೇಶವನ್ನು ಇನ್ನಷ್ಟು ಘಟ್ಟಿಗೊಳಿಸಿತು ಎನ್ನುವುದನ್ನು ಅವರು ಕೃತಿಯಲ್ಲಿ ನಿರೂಪಿಸಿದ್ದಾರೆ. ಅದಕ್ಕಾಗಿ ಶೇಕ್ಸ್‌ಪಿಯರ್‌ನ ನಾಟಕಗಳು, ಸಾನೆಟ್‌ಗಳನ್ನು ಮುಂದಿಟ್ಟುಕೊಂಡು ಇಲ್ಲಿ ಚರ್ಚಿಸಿದ್ದಾರೆ.
ಕತೆಗಾರ-ನಾಟಕಕಾರ ರಾಮಚಂದ್ರದೇವ ಅವರು ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರು. 1948ರ ಮಾರ್ಚ್ 22ರಂದು ಜನಿಸಿದರು. ಕಲ್ಲಡ್ಕ, ಬಾಳ್ತಿಲ, ಪಂಜ, ಪುತ್ತೂರುಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿದ ದೇವ ಅವರು ಮೈಸೂರಿನ ಮಹಾರಾಜಾ ಕಾಲೇಜಿನಿಂದ ಕನ್ನಡ, ಇಂಗ್ಲಿಷ್ ಭಾಷಾಶಾಸ್ತ್ರ, ಹಿಂದಿಗಳನ್ನು ವಿಶೇಷ ವಿಷಯಗಳನ್ನಾಗಿ ತೆಗೆದುಕೊಂಡು ಬಿ.ಎ. ಪದವಿ ಹಾಗೂ ಮಾನಸ ಗಂಗೋತ್ರಿಯಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದರು. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಶೇಕ್ಸ್‌ಪಿಯರ್ ಅನುವಾದಗಳ ತೌಲನಿಕ ಅಧ್ಯಯನಕ್ಕಾಗಿ ಪಿಎಚ್. ಡಿ. ಪಡೆದರು. ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು, ಮೈಸೂರಿನ ಬನುಮಯ್ಯ ಕಾಲೇಜು, ಬೆಂಗಳೂರು ಬಸವನಗುಡಿಯ ನ್ಯಾಷನಲ್ ಕಾಲೇಜು, ಕುವೆಂಪು ವಿಶ್ವವಿದ್ಯಾನಿಲಯಗಳಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕಾರ್ಯ ...
READ MORE