ಎಂದಿಗೂ ಹೊಸದು

Author : ರಾಜೇಂದ್ರ ಚೆನ್ನಿ

Pages 288

₹ 162.00




Year of Publication: 2014
Published by: ಅಭಿರುಚಿ ಪ್ರಕಾಶನ
Address: ನಂ- 386, 14ನೇ ಮುಖ್ಯರಸ್ತೆ, 3ನೇ ತಿರುವು, ಸರಸ್ಪತಿಪುರಂ, ಮೈಸೂರು- 570009

Synopsys

‘ಎಂದಿಗೂ ಹೊಸದು’ ಹಿರಿಯ ಲೇಖಕ, ವಿಮರ್ಶಕ ರಾಜೇಂದ್ರ ಚೆನ್ನಿ ಅವರ ವಿಮರ್ಶಾ ಲೇಖನಗಳ ಸಂಕಲನ. ಚಿಂತಕ ನಟರಾಜ್ ಹುಳಿಯಾರ್ ಅವರು ಬೆನ್ನುಡಿ ಬರೆದಿದ್ದಾರೆ. ಇಲ್ಲಿ ಸುಮಾರು ಐವತ್ತು ವರ್ಷಗಳ ಅವಧಿಯ ಕನ್ನಡ ಕಾದಂಬರಿಗಳು ಹಾಗೂ ನಾಟಕಗಳನ್ನು ಕುರಿತ ಸುದೀರ್ಘ ವಿಮರ್ಶಾತ್ಮಕ ವಿಶ್ಲೇಷಣೆಗಳಿವೆ. ಈ ಕೃತಿ ರಾಜೇಂದ್ರ ಚೆನ್ನಿ ಅವರಲ್ಲಿ ಅಡಗಿರುವ ಅಸಂಖ್ಯಾತ ಪಠ್ಯಗಳ ವ್ಯಾಪ್ತಿಯನ್ನು ಸೂಚಿಸುತ್ತದೆ ಎನ್ನುತ್ತಾರೆ ನಟರಾಜ್ ಹುಳಿಯಾರ್. ರಾಜೇಂದ್ರ ಚೆನ್ನಿ ಅವರು ಸಂಸ್ಕೃತಿ ಹಾಗೂ ಸಮಾಜಗಳನ್ನು ಕುರಿತ ಸ್ವತಂತ್ರ ಚಿಂತಕರೂ ಆಗಿರುವುದರಿಂದ ಅವರ ಒಟ್ಟು ಬರವಣಿಗೆಗೆ ವಿಶಾಲ ಸಾಂಸ್ಕೃತಿಕ ಆಯಾಯ ತಂತಾನೇ ಒದಗಿ ಬಂದಿದೆ.

About the Author

ರಾಜೇಂದ್ರ ಚೆನ್ನಿ
(21 October 1955)

ರಾಜೇಂದ್ರ ಚೆನ್ನಿ ಅವರು ಕುವೆಂಪು ವಿ.ವಿ. ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ನಿವೃತ್ತ ಪ್ರಾಧ್ಯಾಪಕರು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮದವರು. 1955ರ ಅಕ್ಟೋಬರ್ 21ರಂದು ಜನನ. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಮೈಸೂರು ವಿ.ವಿ.ಯಿಂದ ಪಿಎಚ್.ಡಿ ಪಡೆದರು. ಸಂಡೂರು, ಬೆಳಗಾವಿ ಸೇರಿದಂತೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹೀಗೆ ವಿವಿಧೆಡೆ ಬೋಧನೆಯ ಸೇವೆ ಸಲ್ಲಿಸಿ, 1981ರಿಂದ 1991ರವರೆಗೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ನಂತರ, ಕುವೆಂಪು ವಿ.ವಿ. ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದರು. ಕನ್ನಡ-ಇಂಗ್ಲಿಷ್ ಎರಡೂ ಭಾಷೆಯಲ್ಲಿ ವಿಮರ್ಶೆ, ಲೇಖನ ಹಾಗೂ ಕತೆಗಳನ್ನು ಬರೆಯುತ್ತಲೇ ಜನಪರ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ. 2009ನೇ ಸಾಲಿನ ಪ್ರತಿಷ್ಠಿತ ಜಿ.ಎಸ್.ಎಸ್. ಪ್ರಶಸ್ತಿ ಪಡೆದಿದ್ದಾರೆ. ಇವರ ಮೊದಲ ...

READ MORE

Related Books