ಕಥನ ಪ್ರಕಾರದಲ್ಲಿ ಗಂಭೀರವಾಗಿ ಅಧ್ಯಯನ ನಡೆಸುವ ಟಿ. ಪಿ. ಅಶೋಕ ಅವರು ಅತಿ ಸಣ್ಣ ಕತೆಗಳನ್ನು ವಿಮರ್ಶಿಸಿದ, ಗಂಭೀರ ವಿಚಾರಗಳ ಸಂಕಲನ ‘ಅತಿ ಸಣ್ಣಕತೆ : ಸ್ವರೂಪ, ಸಿದ್ಧಿ ಮತ್ತು ಸಾಧ್ಯತೆ’. ‘ಕನ್ನಡದಲ್ಲಿ ‘ಹನಿಗತೆ', 'ಕಿರುಗತೆ’, ‘ಅತಿ ಸಣ್ಣಕತೆ’ ಎಂಬ ಹೆಸರುಗಳಿಂದಲೂ, ಇಂಗ್ಲೀಷಿನ `ಶಾರ್ಪ್ ಶಾರ್ಟ್ ಸ್ಟೋರಿ', ‘ಸಡನ್ ಫಿಕ್ಷೆನ್', ‘ಫ್ಲಾಶ್ ಫಿಕ್ಷನ್', ‘ಮಾರ್ಜಿನ್ ಅಫ್ ನರೇಟಿವ್', 'ಶಾರ್ಟ್ ಶಾರ್ಟ್' ಮುಂತಾದ ಹೆಸರುಗಳಿಂದಲೂ ಕರೆಯಲ್ಪಡುತ್ತಿರುವ ವಿಶಿಷ್ಟ ಕಥನ ಪ್ರಭೇದವೊಂದರ ಗಾಢವಾದ ಚರ್ಚೆಯನ್ನು ಆ ಕ್ಷೇತ್ರದ ಅತ್ಯುತ್ತಮ ಉದಾಹರಣೆಗಳ ಉಲ್ಲೇಖ - ವ್ಯಾಖ್ಯಾನಗಳೊಂದಿಗೆ ಮಾಡುವ ಈ ಪುಸ್ತಕವು ಕನ್ನಡದಲ್ಲಿ ಈ ಬಗ್ಗೆ ನಡೆದಿರುವ ಅಧ್ಯಯನಗಳನ್ನು ಕ್ರೋಢಿಕರಿಸಿ ಅರ್ಥಪೂರ್ಣವಾಗಿ ಮುನ್ನಡೆಸಿದೆ. ಸಾಹಿತ್ಯದ ವಿದ್ಯಾರ್ಥಿಗಳು, ಅಧ್ಯಾಪಕರು, ಸಂಶೋಧಕರಿಗೆ ಮಾತ್ರವಲ್ಲ ಸಾಹಿತ್ಯದ ಬಗೆಗಳಲ್ಲಿ ಆಸಕ್ತಿಯುಳ್ಳ ಎಲ್ಲ ಓದುಗರಿಗೂ ಹಲವು ಬಗೆಗಳಲ್ಲಿ ಉಪಯುಕ್ತವಾಗಬಲ್ಲ ಚೇತೋಹಾರಿ ಬರವಣಿಗೆ ಇಲ್ಲಿದೆ. ಕಥನ ಪ್ರಕಾರದಲ್ಲಿ ಅಧ್ಯಯನ ಮಾಡಬಯಸುವವರಿಗೆ ಇದೊಂದು ಅಪರೂಪದ ಆಕಾರ ಗ್ರಂಥವಾಗಿದೆ.
ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...
READ MORE