ದುಃಖದ ರುಚಿ

Author : ಸಿ. ನಾಗಣ್ಣ

Pages 620

₹ 350.00




Year of Publication: 2011
Published by: ರೂಪ ಪ್ರಕಾಶನ
Address: ನಂ. 2406, 2407/k-1, 1ನೇ ಕ್ರಾಸ್, ಹೊಸಬಂಡಿಕೇರಿ, ಮೈಸೂರು- 570004
Phone: 9342274331

Synopsys

‘ದುಃಖದ ರುಚಿ’ ಲೇಖಕ ಸಿ.ನಾಗಣ್ಣ ಅವರ ವಿಮರ್ಶಾ ಲೇಖನಗಳ ಸಂಕಲನ.  ಕುವೆಂಪು ಮತ್ತು ಪುಷ್ಪ ಜಗತ್ತು, ಕುವೆಂಪು ಮತ್ತು ವಸಾಹತುಶಾಹಿ ಸಂದರ್ಭ, ಕುವೆಂಪು ಮತ್ತು ಬೇಂದ್ರೆ, ಕುವೆಂಪು ಮತ್ತು ಟಾಲ್ ಸ್ಟಾಯ್, ಮಲೆನಾಡಿನ ಚಿತ್ರಗಳಲ್ಲಿ ಕುವೆಂಪು ವ್ಯಕ್ತಿತ್ವ, ಹಂಪನಾ ಅವರ ಚಾರುವಸಂತ, ಕಂಬಾರರ ಚಕೋರಿಯಲ್ಲಿ ಯುಗಳ ಚೈತನ್ಯ, ವೀಚಿ ಸಮಗ್ರ ಕಾವ್ಯ:ಒಂದು ಓದು, ವೀಚಿ ಅವರ ಕಾವ್ಯದಲ್ಲಿ ಮಕ್ಕಳ ಲೋಕ, ಜಾಗತಿಕ ಮಹಿಳಾ ಅನುಭಾವಿಗಳು, ಎಮಿಲಿ ಡಿಕಿನ್ಸನ್:ಕಲೆ ಮತ್ತು ಅಂತರಂಗದ ಬದುಕು, ಎಮಿಲಿ ಡಿಕಿನ್ಸನ್ ಳ ಕಾವ್ಯದಲ್ಲಿ ನಿಶ್ಚಲ ಕೇಂದ್ರ, ಏಟ್ಸ್ ಕವಿಯ ಚೈತನ್ಯದ ಹುಡುಕಾಟ, ಅರಬೀ ಅನುಭಾವಿ ಖಲೀಲ್ ಜಿಬ್ರಾನರ ಪತ್ರಗಳು, ಸೃಜನಶೀಲತೆ ಹಾಗೂ ಸಾಂಸ್ಕೃತಿಕ ಅನನ್ಯತೆ, ಆಚಾರ್ಯ ತೀ.ನಂ.ಶ್ರೀ ಅವರ ಅನುವಾದಿತ ಕವನಗಳು, ಸಮಕಾಲೀನ ಸಂಕಟಗಳಿಗೆ ಸಿದ್ಧೌಷಧ: ಬುದ್ಧ ಮಹಾದರ್ಶನ, ಜಿ.ಕೆ.ರವೀಂದ್ರಕುಮಾರ್ ಅವರ ಕಾವ್ಯ: ಒಂದು ಚಿಂತನೆ, ಸೂಫಿ ಎಂಬ ಅನುಭಾವಿ ಪರಂಪರೆ, ಕನ್ನಡಕ್ಕೆ ಉರ್ದು ಕವಿ ಫೈಜ್ ಅಹ್ಮದ್ ಫೈಜ್, ಮಲೆ ಮಾದೇಶ್ವರ ಮಹಾಕಾವ್ಯದಲ್ಲಿ ಮಹದೇಶ್ವರರ ಪಾತ್ರ ಚಿತ್ರಣ ಸೇರಿದಂತೆ 58 ವಿಮರ್ಶಾ ಲೇಖನಗಳು ಸಂಕಲನಗೊಂಡಿವೆ.

About the Author

ಸಿ. ನಾಗಣ್ಣ

ಡಾ. ಸಿ. ನಾಗಣ್ಣ ಅವರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ತೌಲನಿಕ ಸಾಹಿತ್ಯ ಮತ್ತು ಭಾಷಾಂತರ ವಿಭಾಗದ ಪ್ರಾಧ್ಯಾಪಕರಾಗಿಯೂ, ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಬೋಧಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರು. ಕವಿ, ವಿಮರ್ಶಕ, ಭಾಷಾಂತರಕಾರರಾಗಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಭಾರತೀಯ ಜ್ಞಾನಪೀಠ, ಸರಸ್ವತಿ ಸಮ್ಮಾನ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದರು. ಆಫ್ರಿಕನ್ ಲೇಖಕ ಚಿನುವ ಅಚಿಬೆಯ ಥಿಂಗ್ಸ್ ಫಾಲ್ ಅಪಾರ್ಟ್ ಕೃತಿಯನ್ನು ‘ಭಂಗ’ ಶೀರ್ಷಿಕೆಯಡಿ ಅನುವಾದಿಸಿದ್ದಾರೆ ಖ್ಯಾತ ಬರಹಗಾರ ಸಿ.ಎನ್. ರಾಮಚಂದ್ರನ್ ಅವರ ಬದುಕು-ಬರೆಹ ಕುರಿತ ಕೃತಿ ಪ್ರಕಟಿಸಿದ್ದಾರೆ. ...

READ MORE

Related Books