ವಿಮರ್ಶಕ ಕೆ.ಸಿ. ಶಿವಾರೆಡ್ಡಿ ಅವರು ರಚಿಸಿದ ಬೇಂದ್ರೆ-ಕುವೆಂಪು ಅವರ ಕಾವ್ಯದ ವಿರಾಟ್ ದರ್ಶನವನ್ನು ಪರಿಚಯಿಸುವ ಸಂಶೋಧನಾತ್ಮಕ ಗ್ರಂಥ. ನವೋದಯ ಕನ್ನಡ ಕಾವ್ಯದ ಇಬ್ಬರು ಪ್ರಮುಖ ಕವಿಗಳ ಕಾವ್ಯದ ತೌಲನಿಕ ಅಧ್ಯಯನವನ್ನು ಶಿವಾರೆಡ್ಡಿಯವರು ಈ ಕೃತಿಯಲ್ಲಿ ಮಾಡಿದ್ದಾರೆ. ಉಭಯ ಕವಿಗಳ ಕುರಿತು ಹಲವು ಕೃತಿಗಳನ್ನು ರಚಿಸಿದ ಶಿವಾರೆಡ್ಡಿ ಅವರು ಈ ಕೃತಿಯಲ್ಲಿ ದರ್ಶನ/ಕಾಣ್ಕೆ ವಿರಾಟ್ ಸ್ವರೂಪವನ್ನು ವಿಶ್ಲೇಷಿಸಿ-ವ್ಯಾಖ್ಯಾನಿಸಿದ್ದಾರೆ.
ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದದಲ್ಲಿ ಸಹ ಪ್ರಾಧ್ಯಾಪಕರಾಗಿರುವ ಕೆ.ಸಿ. ಶಿವಾರೆಡ್ಡಿ ಅವರು ಆಧುನಿಕ ಗ್ರಂಥ ಸಂಪಾದನೆಯಲ್ಲಿ ಮಹತ್ವದ ಕೆಲಸ ಮಾಡಿದ್ದಾರೆ. ಕುವೆಂಪು ಅವರ ಸಮಗ್ರ ಕೃತಿಗಳ ಸಂಪಾದಕರಾಗಿ ಅವರು ಮಾಡಿರುವ ಕೆಲಸ ಅನನ್ಯವಾದದ್ದು. ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಕೃತಿಗಳನ್ನು 9 ಸಂಪುಟಗಳಲ್ಲಿ ಸಂಪಾದಿಸಿ ಪ್ರಕಟಿಸಿದ್ದಾರೆ. ಹಾಗೆಯೇ ಬೇಂದ್ರೆಯವರ ಕವಿತೆಗಳನ್ನು ಕುರಿತ ’ಅಂಬಿಕಾತನಯನ ನಂಬಿಕೆಯ ಹಾಡು’ ಹಾಗೂ ’ಶತಮಾನದ ಕವಿತೆ ಜೋಗಿ’ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಒಂದನೇ ನಾಗವರ್ಮನ ಕರ್ನಾಟಕ ಕಾದಂಬರಿ, ಕನಸುಗಳ ಕವಿ ಕಂಬಾರರ ಚಕೋರಿ ಒಂದು ಅಧ್ಯಯನ, ಇದು ಎಂಥಾ ಹಾಡು (ಕವಿ ...
READ MORE