‘ಕನ್ನಡ ಕಾದಂಬರಿಗಳಲ್ಲಿ ವರ್ಣ ಮತ್ತು ವರ್ಗ ಸಂಘರ್ಷ’ ನಿರಂಜನ, ಕಟ್ಟೀಮನಿ, ಚದುರಂಗ ಮತ್ತು ವ್ಯಾಸರಾಯ ಬಲ್ಲಾಳರ ಕಾದಂಬರಿಗಳನ್ನು ಅನುಲಕ್ಷಿಸಿ ಲೇಖಕ ಡಾ. ಆರ್. ವಿ. ಭಂಡಾರಿ ಅವರು ರಚಿಸಿರುವ ಕೃತಿ. ಕೃತಿಯ ಕುರಿತು ಬರೆಯುತ್ತಾ 1993 ರಲ್ಲಿ ನಾನು ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪಡೆದೆ. ನನಗೆ ನಿರ್ದೇಶಕರಾಗಿದ್ದವರು ಡಾ. ಪುರುಷೋತ್ತಮ ಬಿಳಿಮಲೆ. ಈಗ ಅವರು ದಿಲ್ಲಿಯಲ್ಲಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ಒಂದು ನಿರ್ದಿಷ್ಟ ವಿಚಾರಧಾರೆಯ ಹಿನ್ನೆಲೆಯಲ್ಲಿನ ಸಂಶೋಧನೆಗಳೇ ಕನ್ನಡದಲ್ಲಿ ವಿರಳ. ಬಹುಶಃ ಸಾಹಿತ್ಯಕ್ಕಾಗಿಯೇ ಸಾಹಿತ್ಯಾಭ್ಯಾಸ ಎಂಬ ಧೋರಣೆ ಈ ಸ್ಥಿತಿಗೆ ಮುಖ್ಯವಾದ ಕಾರಣವಿದ್ದೀತು. ಆದರೆ ಪ್ರಸ್ತುತ ಈ ನಾಲ್ವರು ಕಾದಂಬರಿಕಾರರ ಕಾದಂಬರಿಗಳು ತಾಳುವ ತಾತ್ವಿಕ ಧೋರಣೆಯಲ್ಲಿ ವರ್ಗ ಮತ್ತು ವರ್ಣ ಸಂಘರ್ಷದ ಚಿಂತನೆಯನ್ನೇ ಇಲ್ಲಿ ಪ್ರಧಾನವಾಗಿ ಎತ್ತಿಕೊಳ್ಳಲಾಗಿದೆ ಎಂದಿದ್ದಾರೆ ಡಾ.ಮ.ನ. ಜವರಯ್ಯ. ಅಲ್ಲದೇ ಈ ನಾಲ್ವರು ಪ್ರಗತೀಶೀಲರಲ್ಲೇ ವರ್ಗ ಸಮಾಜದ ಬಗ್ಗೆ ಒಳನೋಟವುಳ್ಳವರು. ನಾಲ್ವರೂ ಮಾರ್ಕ್ಸ್ ವಾದಿ ವಿಚಾರಧಾರೆಯಿಂದ ಪ್ರಭಾವಿತರಾದವರು ಎಂಬ ಅಭಿಪ್ರಾಯ ಇದೆ. ಈ ಮಹಾಪ್ರಬಂಧವು ತನ್ನ ವಿವೇಚನೆಗೆ ತೆಗೆದುಕೊಂಡಿರುವ ವಸ್ತು ವೈವಿದ್ಯತೆಯಲ್ಲಿನ ಒಂದು ಮುಖ್ಯ ಗುಣಾಂಶವೆಂದರೆ ಈ ನಾಲ್ಕು ಜನ ಕಾದಂಬರಿಕಾರರ ಕೃತಿಗಳ ವಸ್ತುಗಳಲ್ಲಿಯ ವಿಭಿನ್ನತೆಯ ವೈಶಿಷ್ಯ್ಟ. ನಿರಂಜನರು ಬಹುದೂರದ ವ್ಯವಸ್ಥೆಗಳಿಂದ ಕೃತಿಯ ವಸ್ತುವನ್ನು ಆಯ್ಕೆ ಮಾಡಿಕೊಂಡರೆ, ವ್ಯಾಸರಾಯ ಬಲ್ಲಾಳರು ತಮ್ಮದೇ ಜೀವನವ್ಯವಸ್ಥೆಯಲ್ಲೂ ಕೈಗಾರಿಕಾ ವಲಯದಲ್ಲಿನ ಜೀವನವನ್ನು ತೆಗೆದುಕೊಳ್ಳುತ್ತಾರೆ. ಹಾಗೆಯೇ ಚದುರಂಗರು ಜಾತಿ-ಜಾತಿಗಳ ನಡುವಿನ ಸಂಘರ್ಷದ ನಿಜ ಸ್ಥಿತಿಯನ್ನೇ ಕಲೆಯನ್ನಾಗಿಸಿದರೆ ಕಟ್ಟೀಮನಿಯವರು ದುರ್ಬಲ ಜಾತಿ ಹಾಗೂ ಪ್ರಬಲ ಜಾತಿಗಳ ನಡುವಿನ ಘರ್ಷಣೆಯಲ್ಲಿನ ದುರ್ಬಲರ ಶೋಷಣೆಯನ್ನು ಚಿತ್ರಿಸುತ್ತಾ ಹೋಗುವುದನ್ನು ಸಂಶೋಧಕರು ಮನವೊಪ್ಪುವಂತೆ ವಿಮರ್ಶಿಸುತ್ತಾ ಹೋಗುತ್ತಾರೆ ಎಂದು ಡಾ. ಮ. ನ. ಜವರಯ್ಯ ಮೆಚ್ಚುಗೆ ಸೂಚಿಸಿದ್ದಾರೆ.
ಸಾಹಿತಿ ಆರ್.ವಿ. ಭಂಡಾರಿ ಅವರು ಜನಿಸಿದ್ದು 1936 ಮೇ 5ರಂದು. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಕೆರೆಕೋಣ ಇವರ ಹುಟ್ಟೂರು. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದರು. ಇವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಅಪ್ಪಿಕೋ ಮತ್ತೆರಡು ಮಕ್ಕಳ ನಾಟಕ, ಬೆಳಕಿನ ಕಡೆಗೆ, ಬೆಳಕು ಹಂಚಿದ ಬಾಲಕ-ನಾನು ಗಾಂಧಿ ಆಗ್ತೇನೆ, ಬಣ್ಣದ ಹಕ್ಕಿಗಳು, ಈದ್ಗಾ ಮತ್ತು ಬೆಳಕಿನ ಕಡೆಗೆ, ಪ್ರೀತಿಯ ಕಾಳು, ಕಯ್ಯೂರಿನ ಮಕ್ಕಳು, ಯಶವಂತನ ಯಶೋಗೀತ, ಹೂವಿನೊಡನೆ ಮಾತುಕತೆ, ಸುಭಾಷ್‌ಚಂದ್ರ ...
READ MOREಹೊಸತು-2004- ಜುಲೈ
ಒಬ್ಬ ಬರಹಗಾರನ ಒಳದನಿ, ನಿಲುವು, ನಿಷ್ಠೆ ಅಂತೆಯೇ ಒಂದು ಛಾಪು ಆತನ ಕೃತಿಗಳಿಂದ ಬಚ್ಚಿಡಲು ಎಂದೂ ಸಾಧ್ಯವಿಲ್ಲ. ಕೃತಿಕಾರನ ಸ್ವರೂಪವನ್ನು ಧರಿಸಿಕೊಂಡು ಸಾಹಿತ್ಯ ಜನ್ಮ ತಾಳುತ್ತದೆ. ಪ್ರಗತಿಪಂಥದ ಲೇಖಕರಾದ ನಿರಂಜನ, ಕಟ್ಟಿಮನಿ, ಚದುರಂಗ ಹಾಗೂ ಬಲ್ಲಾಳರ ಕೃತಿಗಳು ಬಂಡಾಯ ಸಾಹಿತ್ಯ ವೆಂದು ಗುರುತಿಸಲ್ಪಟ್ಟು ವರ್ಗ ಸಂಘರ್ಷದ ಬದುಕನ್ನು ಪರಿಚಯಿಸುತ್ತವೆ. ಇಂಥ ಸಾಹಿತ್ಯ ವನ್ನು ತಮ್ಮ ಸಂಶೋಧನೆಗಾಗಿ ಆಯ್ದುಕೊಂಡು ಅಲ್ಲಿ ಧಾರಾಳವಾಗಿ ಕಾಣಸಿಗುವ ವರ್ಗ, ವರ್ಣ ಸಂಘರ್ಷದ ಪ್ರಧಾನ ಚಿಂತನೆಯನ್ನು ವಿಶ್ಲೇಷಣಾತ್ಮಕವಾಗಿ ನಿರೂಪಿಸುವ ಕೃತಿ.