ಡಾ. ಕೆ. ಕೃಷ್ಣಮೂರ್ತಿ ಅವರ ಪ್ರತಿಭೆ, ವಿದ್ವತ್ ಗೆ ರಸೋಲ್ಲಾಸ ಕೃತಿಯು ‘ಕನ್ನಡಿಯಲ್ಲಿ ಆನೆಯನ್ನು ಹಿಡಿದಂತೆ’ ಎಂಬಂತಿದೆ. ಸಂಸ್ಕೃತ ಕಾವ್ಯ ಮೀಮಾಂಸೆ, ವೈಯ್ಯಾಕರಣ, ನಾಟಕಗಳ ರಸಾನುಭವ, ಆಂಗ್ಲ ಕವಿ ಲೇಖಕರ ಪ್ರಾಮಾಣಿಕ ಅಭಿವ್ಯಕ್ತಿಯ ಸೌಂದರ್ಯ ವಿಶೇಷವಾಗಿ ಕಾವ್ಯ, ಧ್ವನಿ, ವಸ್ತು, ರಸ, ಅಲಂಕಾರ ಇವೆಲ್ಲವುಗಳ ವಿಸ್ತಾರವಾದ ಲೇಖಕರ ಅರಿವು ಈ ಕೃತಿಯಿಂದ ಪಡೆಯಬಹುದು. ಕೃತಿಯ ಮುನ್ನುಡಿಯಲ್ಲಿ ಹೇಳಿರುವಂತೆ ‘ಧ್ವನಿ-ಕಾವ್ಯದಿಂದ ರಸದ ವ್ಯುತ್ಪತ್ತಿ. ಇದು ಕಾವ್ಯಾನಂದದ ರಸವೇ ಆಗಿದೆ. ಕಾವ್ಯಾನಂದದಿಂದ ಉಂಟಾಗುವ ರಸೋಲ್ಲಾವೇ ಬೇರೆ. ನವರಸಗಳೇ ಬೇರೆ. ಏಕೆಂದರೆ, ವಿಷಯಾಸಕ್ತ ಹಾಗೂ ವಾಸನಾಸಕ್ತ ಕಾಮಿಗಳ ನಿರ್ಭರ ಪ್ರಸಂಗಗಳನ್ನು ರಸ ಕಾವ್ಯದ ವ್ಯಾಪ್ತಿಗೆ ಒಳಪಡುವುದಿಲ್ಲ. ಅದು ಕೀಳುಮಟ್ಟದ ಕುಕಾವ್ಯ ಎಂದೇ ಕವಿ ಚಕ್ರವರ್ತಿಗಳ ಅಭಿಮತ’ ಎಂದು ಸ್ಪಷ್ಟಪಡಿಸಲಾಗಿದೆ. ಆದ್ದರಿಂದ, ಉತ್ತಮ ಹಾಗೂ ಶ್ರೇಷ್ಠ ಕಾವ್ಯದ ಚಿಂತನ-ಮಂಥನದ ನಿರಂತರ ಪ್ರೇರಣೆಯಾಗಿ ಈ ಕೃತಿಯು ತನ್ನ ಮಹತ್ವವನ್ನು ಕಾಯ್ದುಕೊಳ್ಳುತ್ತಲೇ ಇದೆ.
ಕೆ.ಕೃಷ್ಣಮೂರ್ತಿ- ಹುಟ್ಟಿದ್ದು ಹಾಸನ ಜಿಲ್ಲೆ ಕೇರಳಾಪುರದಲ್ಲಿ. ಮಹಾರಾಜ ಕಾಲೇಜಿನಲ್ಲಿ ಬಿ.ಎ ಮತ್ತು ಎಂ.ಎ. ಕನ್ನಡ, ಇಂಗ್ಲಿಷ್, ಸಂಸ್ಕೃತ ಭಾಷೆಗಳಲ್ಲಿ ಸರ್ವಪ್ರಾವಿಣ್ಯ. ಬೊಂಬಾಯಿ ವಿಶ್ವವಿದ್ಯಾಲಯದಿಂದ ಧ್ವಾನ್ಯಾಲೋಕ ಮತ್ತು ಅದರ ವಿಮರ್ಶೆ ಡಾಕ್ಟರೇಟ್ ಪದವಿ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಂಸ್ಕೃತ ವಿಭಾಗದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕೆಲಸ. ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ಮುಖ್ಯಪುಸ್ತಕಗಳು ಧ್ವನ್ಯಾಲೋಕ ಮತ್ತು ಆನಂದವರ್ಧನನ ಕಾವ್ಯಮೀಮಾಂಸೆ, ಮಮ್ಮಟನ ಕಾವ್ಯ ಪ್ರಕಾಶ. ರಾಜಶೇಖರನ ಕಾವ್ಯ ಮೀಮಾಂಸೆ, ದಂಡಿಯ ಕಾವ್ಯದರ್ಶನ, ವಾಮನನ ಕಾವ್ಯಲಂಕರಸೂತ್ರವೃತ್ತಿ, ಕ್ಷೇಮೇಂದ್ರನ ಕವಿಕಂಠಾಭರಣ, ಔಚಿತ್ಯಚರ್ಚೆ, ಭಾಮಹನ ಕಾವ್ಯಾಲಂಕಾರ, ಹಾಗೆಯೇ ಇಂಗ್ಲಿಷಿನಲ್ಲಿ ವಕ್ರೋಕ್ತಿಜೀವಿತ, ಧ್ವನ್ಯಾಲೋಕ, ನಾಟ್ಯಶಾಸ್ತ್ರ ಮತ್ತು ಅಭಿನವ ಭಾರತಿ, ...
READ MORE