‘ಕಾವ್ಯದೊಡಲ ತೆರೆ’ ಪ್ರಕಾಶ್ ಕಡಮೆ ಅವರು ಬರೆದಿರುವ ಪುಸ್ತಕ ಪರಿಚಯ/ವಿಮರ್ಶೆಗಳ ಸಂಕಲನ. ಈ ಕೃತಿಗೆ ಪ್ರಜಾವಾಣಿಯ ಎಸ್. ರಶ್ಮಿ ಅವರ ಬೆನ್ನುಡಿ ಬರಹವಿದೆ. ಪುಸ್ತಕದ ಕುರಿತು ಬರೆಯುತ್ತಾ ‘ಕಾವ್ಯದೊಡಲ ತೆರೆ’ ಹೆಸರಿನಿಂದಲೇ ಅನನ್ಯವಾಗಿರುವ ಪುಸ್ತಕ. ಹೆಸರೊಳಗೆ ಎರಡರ್ಥ. ಒಂದು ಕಾವ್ಯದೊಡಲಿನ ಅಲೆ, ಇನ್ನೊಂದು ಕ್ರಿಯೆಯಾಗಿ ತೆರೆಯುವುದು ಅಂತಲೂ ಆಗ್ತದ. ಉತ್ತರ ಕರ್ನಾಟಕ ಅಥವಾ ಕಿತ್ತೂರು ಕರ್ನಾಟಕದ ವಿವಿಧ ಕವಿ ಮತ್ತು ಲೇಖಕರ ಕೃತಿ ಪರಿಚಯಿಸಿದ ಲೇಖನಗಳ ಸಂಗ್ರಹ ಇದು. ಒಂದು ಪುಸ್ತಕ ಅನೇಕ ಭಾವಗಳು, ಅನೇಕ ಜೀವಗಳು. ಪ್ರತೀ ವ್ಯಕ್ತಿಯ ಜೀವನ ಮತ್ತು ಭಾವನಗಳ ಕಥನವನ್ನು ಸಕಾರಾತ್ಮಕವಾಗಿ ಬರೆಯುವುದು ಬಲು ಕಷ್ಟದ ಕೆಲಸ. ಆದರೆ ಗಟ್ಟಿಕಾಳುಗಳನ್ನೇ ಹೆಕ್ಕುತ್ತ, ಸಶಕ್ತ ಸಾಲುಗಳನ್ನು ಓದುಗರಿಗೆ ನೀಡಿ ಬರಹಗಳ ಕುರಿತು ಕುತೂಹಲ ಹುಟ್ಟಿಸುವ ಕೆಲಸವನ್ನು ಪ್ರಕಾಶ ಕಡಮೆಯವರು ಇಲ್ಲಿ ಅಚ್ಚುಕಟ್ಟಾಗಿ ಮಾಡಿದ್ದಾರೆ.
ನನ್ನ ಪ್ರೀತಿಯ ಸುನಂದಕ್ಕೆ, ಪ್ರಕಾಶಣ್ಣ ಇಬ್ಬರೂ ಅಂತಃಕರುಣಿಗಳು. ಬೆಳೆಸುವ ಗುಣವುಳ್ಳವರು. ಆಲದ ಮರದಂತೆ ಭಾವ ಜೀವಿಗಳಿಗೆಲ್ಲ ನೆರಳಿನ ತಾವು ನೀಡುತ್ತಾರೆ. ಹಾರಲು ವಿಶಾಲ ಗಗನವನ್ನೂ ಪರಿಚಯಿಸುತ್ತಾರೆ. ಆ ವೈಶಾಲ್ಯ ಈ ಲೇಖನಗಳಲ್ಲಿ ಎದ್ದು ಕಾಣುತ್ತಿದೆ. ಕೆಲವೆಡ ಕವಿ ಮತ್ತು ಲೇಖಕರ ಪರಿಚಯ ಇನ್ನಷ್ಟು ಬೇಕಿತ್ತು ಅಂತನಿಸುವುದು ಸಹಜ. ಆದರೆ ಪತ್ರಿಕೆಗಳ ಸ್ಥಳಾವಕಾಶ, ಪದಮಿತಿ ಇವನ್ನೆಲ್ಲ ಗಮನದಲ್ಲಿರಿಸಿಕೊಂಡು, ಒಂದು ಹದದಲ್ಲಿ ಹೇಳುವಷ್ಟನ್ನೇ ಹೇಳಿ, ಓದುಗರು ಇನ್ನಷ್ಟು ಕುತೂಹಲಿಯಾಗುವಂತೆ ಮಾಡುತ್ತಾರೆ. ಕನ್ನಡ ಕಾವ್ಯದ ರಸದೌತಣಕ್ಕೆ ಮುನ್ನ ಉಪ್ಪಿನ ಕಾಯಿ ಅಥವಾ ಸ್ಟಾರ್ಟರ್ ಗಳಂತೆ ಸವಿದು, ಹಸಿವು ಹೆಚ್ಚಿಸುವ ಕೆಲಸ ಈ ಲೇಖನಗಳಿಂದಾಗಿದೆ. ಒಮ್ಮೆ ಓದಲು ಕೈಗೆತ್ತಿಕೊಂಡರೆ, ಹಲವಾರು ಸಾಲುಗಳು ಮನಸಿಗಿಳಿಯುತ್ತದೆ. ಸಾಗರದಾಳದಿಂದ ಮುತ್ತುಗಳನ್ನು ಹೆಕ್ಕುವ ಕೆಲಸ ಇಲ್ಲಿ ಪ್ರಕಾಶಣ್ಣ ಅತೀ ಪ್ರೀತಿಯಿಂದ ಮಾಡಿದ್ದಾರೆ. ನಾವಿನ್ನು ಓದುವುದಷ್ಟೇ ನಮ್ಮ ಕೆಲಸ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಕವಿ, ಬರಹಗಾರ ಪ್ರಕಾಶ್ ಕಡಮೆ ಅವರು ಗೋಕರ್ಣ ಸಮೀಪದ ಬಂಕಿಕೊಡ್ಲ ಹತ್ತಿರದ ಕಡಮೆ ಗ್ರಾಮದವರು. 1958ರಲ್ಲಿ ಜನಿಸಿದರು. ಹೈಸ್ಕೂಲ್ ಹಂತದಿಂದಲೇ ಬರವಣಿಗೆಯಲ್ಲಿ ಆಸಕ್ತಿ. ಅವರಿಗೆ ಸ್ಫೂರ್ತಿಯಾಗಿದ್ದವರು ಕವಿ ಸು. ರಂ. ಎಕ್ಕುಂಡಿ. ಬಾಲ್ಯದಿಂದಲೇ ಅಕ್ಷರ ಲೋಕದ ಮೂಲಕ ತಾನು ಬದುಕಬೇಕು ಎಂದು ಕನಸು ಕಂಡವರು. ಲೆಕ್ಕ ಪತ್ರ ಇಲಾಖೆ ಕೆಲಸ ನಿರ್ವಹಿಸಿದ್ದು, ಕರ್ನಾಟಕ ನೀರಾವರಿ ನಿಗಮದಲ್ಲಿಯೂ ನೌಕರಿ ಮಾಡಿ ನಿವೃತ್ತರಾಗಿದ್ದಾರೆ. ’ಗಾಣದೆತ್ತು ಮತ್ತು ತೆಂಗಿನಮರ (1987), ಆ ಹುಡುಗಿ (1997) ಹಾಗೂ ಅಮ್ಮನಿಗೊಂದು ಕವಿತೆ’ ಎಂಬ ಕವನ ಸಂಕಲನಗಳನ್ನು ರಚಿಸಿದ್ದಾರೆ. ’ಪರಿಮಳದಂಗಳ ಮತ್ತು ದಾಂಪತ್ಯ ನಿಷ್ಠೆ -ಪರಿಕಲ್ಪನೆ ಬದಲಾಗುತ್ತಿದೆಯೇ? ...
READ MORE