ಇದು ಬರಿ ಬೆಳಗಲ್ಲೊ ಅಣ್ಣಾ

Author : ಬಸವರಾಜ ಸಾದರ

Pages 72

₹ 80.00




Year of Publication: 2021
Published by: ಸಂಗಾತ ಪುಸ್ತಕ
Address: ರಾಜೂರ ಅಂಚೆ, ಗಜೇಂದ್ರಗಡ ತಾಲ್ಲೂಕು, ಗದಗ ಜಿಲ್ಲೆ- 582114
Phone: 9449922800

Synopsys

’ಇದು ಬರಿ ಬೆಳಗಲ್ಲೋ ಅಣ್ಣಾ’ ಲೇಖಕ ಬಸವರಾಜ ಸಾದರ ಅವರ ಬೇಂದ್ರೆ ಸಾಹಿತ್ಯದ ಅವಲೋಕನ ಕೃತಿಯಾಗಿದೆ. ದ. ರಾ ಬೇಂದ್ರೆಯವರ ಜನ್ಮಶತಮಾನೋತ್ಸವದ ನಿಮಿತ್ತ, ಅವರ ಸಾಹಿತ್ಯವನ್ನು ಕುರಿತಾಗಿ ಧಾರವಾಡ ಆಕಾಶವಾಣಿ ಕೇಂದ್ರವು ನೂರು ಜನ ಆಮಂತ್ರಿಕ ಶ್ರೋತೃಗಳ ಸಮ್ಮುಖದಲ್ಲಿ ಆಯೋಜಿಸಿ, ನೇರಪ್ರಸಾರ ಮಾಡಿದ ನೂರು ನಿಮಿಷಗಳ ಅವಧಿಯ ಸಾಹಿತ್ಯಿಕ ವಿಚಾರ ಸಂಕಿರಣವಿದು. ’ ಇದು ಬರಿ ಬೆಳಗಲ್ಲೊ ಅಣ್ಣಾ’ ಪ್ರಸಾರ ಮಾಧ್ಯಮದೊಳಗ ಒಂದು ಐತಿಹಾಸಿಕ ದಾಖಲೆಯೇ ಆದಂತಹ ಈ ವಿಚಾರ ಸಂಕಿರಣದೊಳಗೆ ಕನ್ನಡದ ಹಿರಿಯ ವಿಮರ್ಶಕರು ಮಂಡಿಸಿದ ಎಲ್ಲ ಪ್ರಬಂಧಗಳನ್ನು ಸಂಕಲಿಸಿದ ಕೃತಿ ಇದು. 

About the Author

ಬಸವರಾಜ ಸಾದರ
(20 July 1955)

ಕವಿ, ಕಥೆಗಾರ ಹಾಗೂ ಹೆಸರಾಂತ ಪ್ರಸಾರತಜ್ಞ ಡಾ. ಬಸವರಾಜ ಸಾದರ ಹುಟ್ಟಿದ್ದು 1955 ರ ಜುಲೈ 20 ರಂದು,  ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ. ಮೂಲತಃ ಕಲಘಟಗಿ ತಾಲೂಕಿನ ಹುಲ್ಲಂಬಿಯವರಾದ ಇವರು ಧಾರವಾಡದ ಕರ್ನಾಟಕ ಕಾಲೇಜಿನಿಂದ ಉನ್ನತ ಶ್ರೇಣ ಯಲ್ಲಿ ಬಿ.ಎ. ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ರ್ಯಾಂಕ್ ಮತ್ತು ಚಿನ್ನದ ಪದಕದೊಂದಿಗೆ  ಎಂ. ಎ. ಪದವಿ ಪಡೆದಿದ್ದಾರೆ. ’ಬಸವರಾಜ ಕಟ್ಟೀಮನಿಯವರ ಕಾದಂಬರಿಗಳು’ ಎಂಬ ವಿಷಯ ಕುರಿತ ಅಧ್ಯಯನಕ್ಕೆ ಪಿಎಚ್.ಡಿ ಪದವಿ ಪಡೆದಿರುವ ಇವರು, ರ್ಯಾಂಕ್ ಹಾಗೂ ಮತ್ತೊಂದು ಚಿನ್ನದ ಪದಕದೊಂದಿಗೆ ಡಿಪ್ಲೋಮಾ-ಇನ್-ಬಸವ ಸ್ಟಡೀಜ್‍ನ್ನೂ ಪೂರೈಸಿದ್ದಾರೆ. 1984 ರಲ್ಲಿ ಕಾರ್ಯಕ್ರಮ ನಿರ್ವಾಹಕನೆಂದು ...

READ MORE

Related Books