ಊರೊಳಗಿಷ್ಟು ಉತ್ಪಾತವೇನೋ

Author : ಒಕ್ಕುಂದ ಎಂ.ಡಿ.

Pages 72

₹ 65.00




Year of Publication: 2016
Published by: ಸಮಾಜ ವಿಜ್ಞಾನ ಅಧ್ಯಯನ ಸಂಸ್ಥೆ
Address: ನಂ.30, 1ನೇಯ ಕ್ರಾಸ್, ಜಿ.ಕೆ. ಡಬ್ಲ್ಯೂ ಲೇಔಟ್, ವಿಜಯನಗರ, ಬೆಂಗಳೂರು- 560040
Phone: 8746023987

Synopsys

‘ಊರೊಳಗಿಷ್ಟು ಉತ್ಪಾತವೇನೋ’ ಲೇಖಕ ಎಂ.ಡಿ. ಒಕ್ಕುಂದ ಅವರು ತತ್ವಪದಕಾರರು ಮತ್ತು ಧಾರ್ಮಿಕ ಸೌಹಾರ್ದತೆ ಕುರಿತು ಬರೆದಿರುವ ವಿಮರ್ಶಾ ಕೃತಿ. ಲೇಖಕ ಎಸ್. ನಟರಾಜ ಬೂದಾಳು ಅವರು ಬೆನ್ನುಡಿ ಬರೆದು ‘ಗೆಳೆಯ ಎಂ.ಡಿ. ಒಕ್ಕುಂದ ಸಮೂಹದ ಹಿತವನ್ನು ಸದಾ ಬಯಸುವ ಅಪ್ಪಟ ಮನುಷ್ಯ. ಈ ನೆಲದ ಬಹುತ್ವವನ್ನು ಪೋಷಿಸುವ ಜೀವಸೆಲೆಗಳನ್ನು ಮರುಪೂರಣ ಮಾಡಲು ಅಗತ್ಯವಾದುದನ್ನೇ ಮಾಡಬಯಸುವ ಕ್ರಿಯಾಶೀಲ. ಅವರ ಈ ಪುಸ್ತಕ ಕನ್ನಡದ ನಿಜ ಅಸ್ಮಿತೆಯ ಕ್ರಿಯಾರೂಪವಾಗಿರುವ ತತ್ವಪದಕಾರರನ್ನು ಕುರಿತ ಹಲವು ಲೇಖನಗಳ ಸಂಗ್ರಹವಿದು’ ಎನ್ನುತ್ತಾರೆ. 

ಶರೀಫ, ಕಡಕೋಳ ಮಡಿವಾಳಪ್ಪ, ಶಿವಲಿಂಗವ್ವ ಜತ್ತಿ ಮುಂತಾದ ತತ್ವಪದಕಾರರ ಕೆಲವು ತತ್ವಪದಗಳನ್ನು ಕುರಿತ ಅಭಿಪ್ರಾಯಗಳಿವೆ. ಅವುಗಳನ್ನು ಒಟ್ಟು ಮಾಡುವುದರಲ್ಲಿಯೇ ಒಂದು ನಿಸರ್ಗಪ್ರೇಮವೂ, ಇಲ್ಲಿ ಯಾರೂ ಅಮುಖ್ಯರಲ್ಲ ಎನ್ನುವ ವಿಶ್ವಾತ್ಮಕತೆಯೂ ಇದೆ.

About the Author

ಒಕ್ಕುಂದ ಎಂ.ಡಿ.
(15 January 1967)

ಕವಿ- ಲೇಖಕ ಎಂ.ಡಿ.ಒಕ್ಕುಂದ ಅವರು ಕನ್ನಡ ಅಧ್ಯಾಪಕರಾಗಿದ್ದಾರೆ. ಅವರು ಧಾರವಾಡ ಜಿಲ್ಲೆ/ತಾಲೂಕಿನ ಅಮ್ಮಿನಭಾವಿಯಲ್ಲಿ 1967 ರ ಜೂನ್ 15 ರಂದು ಜನಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಗದಗ ಜಿಲ್ಲೆಯ ನರಗುಂದದ ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ರೆಕ್ಕೆ ಗರಿಗಳ ಬಿಚ್ಚಿ, ತುಳುಕು ಅವರ ಕವನ ಸಂಕಲನವಾಗಿದೆ.    ...

READ MORE

Related Books