‘ನಿಜದ ಬೆಳಕಿನೆಡೆಗೆ ಒಂದು ಧ್ಯಾನ’ ಅನಂತಮೂರ್ತಿ ಅವರ ವಿಚಾರ - ವಿಮರ್ಶೆಗಳ ಸಂಕಲನ. ನಿಜದ ಬೆಳಕಿನೆಡೆಗೆ ಒಂದು ಧ್ಯಾನ, ಅಸಮಾನತೆ ಸೃಷ್ಟಿಸುವ ಜಾಣತನ, ಪ್ರತಿ ಗ್ರಾಮದಲ್ಲಿ ಭಾರತದ ಕೇಂದ್ರ ಇದೆ, ಬೂಸಾ ಚಳವಳಿ- ಕಾಲು ಶತಮಾನ, ಕುಮಾರವ್ಯಾಸನ ಕೃಷ್ಣ-ಒಂದು ಪ್ರತಿಕ್ರಿಯೆ, ಲೋಹಿಯಾ ಜೊತೆ, ವರ್ತನೆಯ ಸಮಶ್ರುತಿ- ಎಚ್.ಜಿ. ಗೋವಿಂದೇಗೌಡರು, ನ್ಯಾಯಾಂಗದ ಮೂಲಕವೇ ಸತ್ಯ, ಲೋಕಯುತವನ್ನು ಜೀವಂತವಾಗಿಟ್ಟ ರಾಮದಾಸ್, ಹಾವು ಹುತ್ತದ ರೂಪಕ-ಬಂಗಾರಪ್ಪ ಒಂದು ನೆನಪು, ಜಗತ್ತನ್ನು ಕನ್ನಡದ ಮೂಲಕ ಬರಮಾಡಿಕೊಳ್ಳುವ ಮಾದರಿ, ಪ್ರೀತಿಯೇ ಈ ಕವಿಯ ಸ್ಥಾಯಿ, ಕೋಪ ಸಂಚಾರಿ, ವಿನಯದ ಈ ಭಾವನೆ, ನೋ ಮ್ಯಾನ್ಸ್ ಲ್ಯಾಂಡ್, ಇದು ನನ್ನದು ಆದರೂ ನನ್ನದಾಗಬೇಕಿದೆ, ಓಶೋ ಹೇಳುವ ಕಥಾಕ್ರಮ, ಲೇಹ್ ಜಾಯೇಂಗೆ , ಕೆ.ಎಸ್, ಪೂರ್ಣಿಮಾ ಅವರ ಕಾಲದೆಲೆಯ ಮೇಲೆ, ಮತ್ತು ಕಲ್ಕುಳಿ ವಿಠಲ್ ಹೆಗ್ಗಡೆ ಅವರ ಮಂಗನ ಬ್ಯಾಟಿ ವಿಮರ್ಶಾ ಲೇಖನಗಳಿವೆ.
ಕಥೆ-ಕಾದಂಬರಿ ಮತ್ತು ವೈಚಾರಿಕ ಚಿಂತನೆಗಳ ಮೂಲಕ ಕನ್ನಡ- ಭಾರತದ ಸಾಹಿತ್ಯ-ಸಾಂಸ್ಕೃತಿಕ ಚಿಂತನೆಯನ್ನು ಶ್ರೀಮಂತಗೊಳಿಸಿದವರು ಯು.ಆರ್. ಅನಂತಮೂರ್ತಿ. ತಂದೆ ಉಡುಪಿ ರಾಜಗೋಪಾಲಾಚಾರ್ಯ ತಾಯಿ ಸತ್ಯಮ್ಮ. ತೀರ್ಥಹಳ್ಳಿಯ ಮೇಳಿಗೆಯಲ್ಲಿ 1932ರ ಡಿಸೆಂಬರ್ 21 ಜನಿಸಿದರು. ದೂರ್ವಾಸಪುರದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಸಂಸ್ಕೃತ ಕಲಿತು ಶಾಲಾ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಪಡೆದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಪದವಿ ಗಳಿಸಿದರು. ಬರ್ಮಿಂಗ್ ಹ್ಯಾಂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ (1966) ಪದವಿ ಪಡೆದರು. ಹಾಸನದ ಕಾಲೇಜಿನಲ್ಲಿ ಅಧ್ಯಾಪಕ (1956) ರಾದ ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಂತರ ಕೇರಳದ ಮಹಾತ್ಮಗಾಂಧಿ ವಿಶ್ವವಿದ್ಯಾಲಯದ ಕುಲಪತಿ (1987-91) ಗಳಾಗಿ ...
READ MORE